ಆರೋಗ್ಯ

ಎಳನೀರು ಕುಡಿಯುವ ಪ್ರತಿಯೊಬ್ಬರೂ ಇದನ್ನು ಓದಿ, ನಿಮಗೆ ಗೊತ್ತಿಲ್ಲದ ಎಳನೀರಿನ ರಹಸ್ಯ ಇಲ್ಲಿದೆ.

Pinterest LinkedIn Tumblr

ಸ್ನೇಹಿತರೆ ಬೇಸಿಗೆ ಮತ್ತು ಇತರೆ ಸಮಯದಲ್ಲಿ ಕಷ್ಟದ ಕೆಲಸಗಳನ್ನ ಮಾಡುವವರು ತಮ್ಮ ದಣಿವನ್ನ ನಿವಾರಿಸಲು ರಸ್ತೆ ಬದಿಯಲ್ಲಿ ಇರುವ ತಂಪು ಪಾನೀಯಗಳ ಮೊರೆಹೋಗುತ್ತಾರೆ. ಇನ್ನು ರಸ್ತೆ ಬದಿಯಲ್ಲಿ ಹಲವಾರು ತಂಪು ಪಾನಿಗಳು ದೊರೆಯುತ್ತದೆ, ಆದರೆ ಅನರು ಹೆಚ್ಚಾಗಿ ಎಳನೀರನ್ನ ಹೆಚ್ಚಾಗಿ ಇಷ್ಟಪಟ್ಟು ಕುಡಿಯುತ್ತಾರೆ,

ಎಳನೀರನ್ನ ಕುಡಿದರೆ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ಎಳನೀರು ನಮ್ಮ ಬಾಯಾರಿಕೆ ಮಾತ್ರವಲ್ಲದೆ ನಮ್ಮ ದೇಹದ ಉಷ್ಣತೆಯನ್ನ ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ, ಇನ್ನು ಬೇಸಿಗೆಯ ಸಮಯದಲ್ಲಿ ಎಳನೀರನ್ನ ಕುಡಿಯಲು ಜನರು ಮುಗಿಬೀಳುತ್ತಾರೆ. ಇನ್ನು ಎಳನೀರು ತುಂಬಾ ಆರೋಗ್ಯಕರವಾದ ಪಾನೀಯ ಎಂದು ಪರಿಗಣೆಯನ್ನು ಪಡೆದುಕೊಂಡಿದೆ, ಇನ್ನು ಎಳನೀರು ವಿಟಮಿನ್ ಸಿ, ಮೆಗ್ನೇಷಿಯಂ ಮತ್ತು ಪೊಟ್ಯಾಶಿಯಂಗಳ ಸಮೃದ್ಧ ಪ್ರಮಾಣವನ್ನ ಹೊಂದಿರುವುದರಿಂದ ಎಳನೀರನ್ನ ಒಂದು ಆರೋಗ್ಯಕರವಾದ ಪಾನೀಯ ಎಂದು ಕರೆಯಲಾಗುತ್ತದೆ.

ಇನ್ನು ಎಳನೀರು ರಕ್ತದ ಒತ್ತಡವನ್ನ ಕಡಿಮೆ ಮಾಡುತ್ತದೆ, ಇನ್ನು ರಕ್ತದ ಒತ್ತಡವನ್ನ ಹೊಂದಿರುವ ಜನರು ಪ್ರತಿದಿನ ಎಳನೀರನ್ನ ಸೇವನೆ ಮಾಡಿದರೆ ಅವರ ರಕ್ತದ ಒತ್ತಡದ ಪ್ರಮಾಣ ಕಡಿಮೆ ಆಗುತ್ತದೆ. ಇನ್ನು ಹೆಚ್ಚಿನ ಸೋಡಿಯಂ ಸೇವನೆಯಿಂದ ನಮ್ಮ ದೇಹದ ಉಬ್ಬುವಿಕೆಯನ್ನ ಎಳನೀರು ಕಡಿಮೆ ಮಾಡುತ್ತದೆ ಯಾಕೆ ಅಂದರೆ ಇದು ಹೆಚ್ಚಿನ ಪೊಟ್ಯಾಶಿಯಂ ಅನ್ನು ಒಳಗೊಂಡಿದೆ ಮತ್ತು ಈ ಪೊಟ್ಯಶಿಯಂ ಸೋಡಿಯಂ ಪ್ರಾಮಾಣವನ್ನ ದೇಹದಿಂದ ಕಡಿಮೆ ಮಾಡುತ್ತದೆ. ಇನ್ನು ಮಾನವನ ದೇಹದ ತೂಕ ಕಡಿಮೆ ಮಾಡಲು ಎಳನೀರು ಅತ್ಯಂತ ಪರಿಣಾಮಕಾರಿಯಾದ ಪಾನೀಯ ಎಂದು ಕರೆಯಲಾಗುತ್ತದೆ ಯಾಕೆ ಅಂದರೆ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವನ್ನ ಹೊಂದಿರುವುದಿಲ್ಲ.

ಇನ್ನು ಸ್ನಾಯು ಸೆಳೆತದಿಂದ ಬಳಲುತ್ತಿರುವವರು ಎಳನೀರನ್ನ ಹೆಚ್ಚಾಗಿ ಸೇವನೆ ಮಾಡಿದರೆ ಅದರ ಸ್ನಾನು ಸೆಳೆತ ಕೂಡ ಕಡಿಮೆ ಆಗುತ್ತದೆ ಎಂದು ಹೇಳುತ್ತಿದೆ ವೈದ್ಯಲೋಕ. ಇನ್ನು ಮೂಳೆ ಮುರಿತ ಅಥವಾ ಮಕ್ಕಳು ದಿನಾಲೂ ಎಳನೀರನ್ನ ಸೇವನ್ನ ಮಾಡಿದರೆ ಅವಳ ಮೂಳೆಗಳು ಬಲಿಷ್ಠವಾಗುತ್ತದೆ, ಸ್ನೇಹಿತರೆ ಬಿಡುವಿನ ಸಮಯದಲ್ಲಿ ಎಳನೀರಿನ ಸೇವನೆಯನ್ನ ರೂಡಿ ಮಾಡಿಕೊಳ್ಳಿ, ಯಾವುದೋ ಕಂಪನಿಯ ಕೆಮಿಕಲ್ ಮಿಶ್ರೀತ ತಂಪು ಪಾನೀಯಗಳ ಸೇವನೆಯ ಬದಲು ನೈಸರ್ಗಿಕವಾಗಿ ಸಿಗುವ ಎಳನೀರನ್ನ ಕುಡಿದರೆ ನಿಮ್ಮ ದೇಹಕ್ಕೆ ಒಳ್ಳೆಯ ಪ್ರಯೋಜನವಾಗಲಿದೆ.

Comments are closed.