ಕೋಲ್ಕತಾ: ಸರಕಾರ ವಿರೋಧಿ ಚಟುವಟಿಕೆ ನಡೆಸಿದ ಆಪಾದನೆ ಮೇರೆಗೆ ಕೋಲ್ಕತಾದ ವಿಶ್ವಭಾರತಿ ವಿಶ್ವವಿದ್ಯಾಲಯದ ಬಾಂಗ್ಲಾದೇಶದ ವಿದ್ಯಾರ್ಥಿನಿಗೆ ಭಾರತ ಬಿಟ್ಟು ತೊಲಗುವಂತೆ ನೋಟಿಸ್ ನೀಡಲಾಗಿದೆ. ವಿವಿಯ ಪದವಿ ವಿದ್ಯಾರ್ಥಿನಿ ಅಫ್ಸರಾ ಅನಿಕಾ ಮೀಮ್‌ಗೆ ಗೃಹ ಸಚಿವಾಲಯದಡಿ ಬರುವ ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಯಿಂದ ಫೆ. 14ರಂದು ನೋಟಿಸ್ ಜಾರಿಯಾಗಿದೆ.
ನೋಟಿಸ್ ಸ್ವೀಕರಿಸಿದ 15 ದಿನಗಳೊಳಗೆ ಭಾರತ ಬಿಟ್ಟು ಹೋಗುವಂತೆ ಸೂಚಿಸಲಾಗಿದೆ. ಆದರೆ, ಭಾರತ ವಿರೋಧಿ ಚಟುವಟಿಕೆ ಕುರಿತು ಸ್ಪಷ್ಟವಾಗಿ ನಮೂದಿಸಿಲ್ಲ. ವಿದ್ಯಾರ್ಥಿನಿ ಅಫ್ಸರಾ ಅನಿಕಾ ಮೀಮ್ ತನ್ನ ಫೇಸ್‌ಬುಕ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದಿದ್ದ ಪ್ರತಿಭಟನೆಯ ಫೋಟೋಗಳನ್ನು ಹಂಚಿಕೊಂಡಿದ್ದರು ಎಂದು ಆಪಾದಿಸಲಾಗಿದೆ.
Comments are closed.