ಕರ್ನಾಟಕ

ರೇವೂರ್‌ಗೆ ಸಚಿವ ಸ್ಥಾನ ನೀಡದೇ ಹೋದ್ರೆ 10 ಶಾಸಕರಿಂದ ರಾಜೀನಾಮೆ: ಯಡಿಯೂರಪ್ಪಗೆ ಎಚ್ಚರಿಕೆ ನೀಡಿದ ಸ್ವಾಮೀಜಿ

Pinterest LinkedIn Tumblr

ಬೆಂಗಳೂರು: ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಲಿಂಗಾಯತ ಸ್ವಾಮೀಜಿ ವಚನನಾಂದ ಸ್ವಾಮೀಜಿ ಆವಾಜ್ ಹಾಕಿದ್ದ ಪ್ರಕರಣ ಜನಮಾನಸದಿಂದ ಮರೆಯಾಗುವ ಮುನ್ನವೇ ಮತ್ತೊಬ್ಬ ಸ್ವಾಮೀಜಿ ಸಿಎಂ ಗೆ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ವರ್ಷದ ಒಳಗಾಗಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌ಗೆ (ಅಪ್ಪುಗೌಡ) ಸಚಿವ ಸ್ಥಾನ ನೀಡದೇ ಹೋದ್ರೆ 10 ಶಾಸಕರಿಂದ ರಾಜೀನಾಮೆ ಕೊಡಿಸುವಷ್ಟು ತಾಕತ್ತು ತಮ್ಮ ಬಳಿ ಇದೆ ಎಂದು ಶ್ರೀಶೈಲ ಸಾರಂಗ ಮಠದ ಡಾ ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ ನೇರವಾಗಿ ಸಿಎಂ ಯಡಿಯೂರಪ್ಪನವರಿಗೇ ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಉಮೇಶ್ ಜಾಧವ್ ಗೆಲುವಿಗೆ ರೇವೂರ್ ಕಾರಣರಾಗಿದ್ದರು. ಆ ವೇಳೆ ಜಾದವ್ ಗೆದ್ದರೇ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಮೊದಲ ಹಂತದ ಹಾಗೂ ಎರಡನೇ ಹಂತದಲ್ಲಿ ಸಂಪುಟ ವಿಸ್ತರಣೆ ವೇಳೆ ತಮ್ಮ ಹೆಸರು ಇರಲಿದೆ ಎಂದು ರೇವೂರ ವಿಶ್ವಾಸ ಹೊಂದಿದ್ದರು. ಆದರೆ ಬಜೆಟ್ ಅಧಿವೇಶನದ ನಂತರ ನಡೆಯುವ ವಿಸ್ತರಣೆಯಲ್ಲೂ ತಮ್ಮ ಹೆಸರು ಇಲ್ಲ, ಹೀಗಾಗಿ ಸ್ವಾಮೀಜಿ ಮೊರೆ ಹೋಗಿದ್ದಾರೆ.

“ಉತ್ತರ ಮತ್ತು ಹೈದರಾಬಾದ್-ಕರ್ನಾಟಕ ಪ್ರದೇಶಗಳ ಅನೇಕ ಶಾಸಕರು ಅನೇಕ ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಮತ್ತು ಬಹಳ ಪ್ರಭಾವಶಾಲಿಯಾಗಿದ್ದಾರೆ, ಹೀಗಿದ್ದರೂ ಅವರಿಗೆ ಕ್ಯಾಬಿನೆಟ್ ಸ್ಥಾನಗಳನ್ನು ನಿರಾಕರಿಸಲಾಗಿದೆ. ಹೀಗಾಗಿ ಹಲವರು ತೀವ್ರ ಹತಾಶೆಗೊಳಗಾಗಿದ್ದಾರೆ.

ಯಡಿಯೂರಪ್ಪ ಸಂಪುಟದಲ್ಲಿ 28 ಸಚಿವರಿದ್ದು, ಅದರಲ್ಲಿ ಒಂಬತ್ತು ಮಂದಿ ಲಿಂಗಾಯತ ಶಾಸಕರಿದ್ದಾರೆ. ಹೆಚ್ಚಿನ ಮಂದಿ ಲಿಂಗಾಯತ ಶಾಸಕರು ಪ್ರತಿನಿಧಿಸುತ್ತಿದ್ದಾರೆ.

Comments are closed.