ಹೊಸದಿಲ್ಲಿ: ಕೊರೊನಾ ವೈರಸ್‌ನ ಪರಿಣಾಮ ಭಾರತವು ಮುಂದಿನ ತಿಂಗಳು ಸೈಪ್ರಸ್‌ನಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಅತ್ಯಂತ ಅಪಾಯಕಾರಿಯಾಗಿರುವ ಈ ವೈರಸ್‌ನ ಪರಿಣಾಮ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳಿಗೆ ಬಹಳಷ್ಟು ಹೊಡೆತ ಬೀಳುತ್ತಿದೆ.
ಇಂಟರ್‌ನ್ಯಾಶನಲ್ ಶೂಟಿಂಗ್ ನ್ಪೋರ್ಟ್ಸ್ ಫೆಡರೇಶನ್‌ನಿಂದ ಮಾನ್ಯತೆ ಪಡೆದ ಶಾಟ್‌ಗನ್ ವಿಶ್ವಕಪ್ ಕೂಟವು ನಿಕೋಶಿಯದಲ್ಲಿ ಮಾ. 4ರಿಂದ 13ರ ವರೆಗೆ ನಡೆಯಲಿದೆ.
ಆರೋಗ್ಯ ಸಚಿವಾಲಯದ ಪ್ರಯಾಣ ಸಲಹೆಯ ಆಧಾರದಲ್ಲಿ ಭಾರತೀಯ ತಂಡವು ಸೈಪ್ರಸ್ ವಿಶ್ವಕಪ್ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಕೊರೊನಾದಿಂದಾಗಿ ಕೆಲವೊಂದು ರಾಷ್ಟ್ರಗಳು ಪ್ರಯಾಣಕ್ಕೆ ನಿಷೇಧ ಹೇರಿವೆ. ಅಂತಹ ರಾಷ್ಟ್ರಗಳಲ್ಲಿ ಕಡಿಮೆಪಕ್ಷ ಒಂದು ರಾಷ್ಟ್ರ ಈ ಕೂಟದಲ್ಲಿ ಭಾಗವಹಿಸುವುದನ್ನು ನಾವು ಗಮನಿಸಿದ್ದೇವೆ. ಇದುವೇ ಹಿಂದೆ ಸರಿಯಲು ಕಾರಣವಾಗಿದೆ ಎಂದು ಭಾರತೀಯ ರೈಫಲ್ ಫೆಡರೇಶನ್‌ನ ಪ್ರಕಟನೆ ತಿಳಿಸಿದೆ.
ಸೈಪ್ರಸ್ ವಿಶ್ವಕಪ್ ಬಳಿಕ ಮುಂದಿನ ಐಎಸ್‌ಎಸ್‌ಎಫ್ ವಿಶ್ವಕಪ್ ಮಾ. 16ರಿಂದ ಹೊಸದಿಲ್ಲಿಯಲ್ಲಿ ನಡೆಯಲಿದೆ. ಹೀಗಾಗಿ ಭಾರತೀಯ ಶೂಟರ್‌ಗಳು ಮಾ. 12ರಂದು ತವರಿಗೆ ಮರಳಬೇಕಾಗಿದೆ. ಒಂದು ವೇಳೆ ತಂಡದ ಯಾರಿಗಾದರೂ ವೈರಸ್ ಸೋಂಕು ತಗುಲಿದರೆ ಅವರು ದಿಲ್ಲಿಯಲ್ಲಿ ನಡೆಯುವ ಕೂಟದಲ್ಲಿ ದೇಶವನ್ನು ಪ್ರತಿನಿಧಿಸಲು ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲೂ ಭಾರತೀಯ ತಂಡ ಕೂಟದಿಂದ ಹಿಂದೆ ಸರಿದಿದೆ ಎನ್ನಲಾಗಿದೆ.
Comments are closed.