ಕರಾವಳಿ

ಕರೋನಾ ವೈರಸ್ ಜಾಗೃತಿ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾವಿಸಿದ ಶಾಸಕ ಡಾ.ಭರತ್ ಶೆಟ್ಟಿ

Pinterest LinkedIn Tumblr

ಮಂಗಳೂರು ; ಕರೋನಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಲು ಸರಕಾರ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ತಿಳಿಯಪಡಿಸಬೇಕು ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಸೋಮವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು.

ಈ ಬಗ್ಗೆ ಶೂನ್ಯವೇಳೆಯಲ್ಲಿ ಪ್ರಸ್ತಾವಿಸಿದ ಶಾಸಕ ಡಾ.ಭರತ್ ಶೆಟ್ಟಿಯವರು ಕರೋನಾ ವೈರಸ್ ಹಿಂದೆಯೂ ಇತ್ತು. ಆದರೆ ನೊಯಲ್ ಕರೋನಾ ವೈರಸ್ ಮೊದಲಬಾರಿಗೆ ಪತ್ತೆಯಾಗಿದೆ. ಆರು ಉಪಖಂಡಗಳಲ್ಲಿ ಅದು ಹರಡುತ್ತಿದೆ. ಚೀನಾದ ಬಳಿಕ ಜನಸಂಖ್ಯೆಯಲ್ಲಿ ಭಾರತ ದೊಡ್ಡ ರಾಷ್ಟ್ರ. ಇಲ್ಲಿ ಕರೋನಾ ಹಬ್ಬಿದರೆ ಅದನ್ನು ನಿಭಾಯಿಸಲು ಏನು ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕೆ ಯಾವ ರೀತಿಯ ಪೂರ್ವ ತಯಾರಿ ಮಾಡಲಾಗಿದೆ ಎನ್ನುವುದನ್ನು ಸರಕಾರ ತಿಳಿಯಪಡಿಸಬೇಕು ಎಂದು ಹೇಳಿದರು.

ಮಾಹಿತಿಯ ಕೊರತೆಯಿಂದ ಜನಭಯಭೀತರಾಗಿ ಮುಖಗವಸು ಹಾಕಿಕೊಂಡು ತಿರುಗುತ್ತಿದ್ದಾರೆ. ಇದರಿಂದ ಆರೋಗ್ಯ ಕ್ಷೇತ್ರದ ಮುಂಚೂಣಿ ಸಿಬ್ಬಂದಿಗಳಿಗೆ ಮುಖಗವಸುಗಳ ಕೊರತೆ ಎದುರಾಗಬಹುದು. ಕರೋನಾ ಬಗ್ಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಶಾಸಕ ಡಾ.ಭರತ್ ಹೇಳಿದರು.

ಇದುವರೆಗೆ ರಾಷ್ಟ್ರದಲ್ಲಿ 39 ಮಂದಿಗೆ ಕರೋನಾ ತಗಲಿರುವುದು ಧೃಡಪಟ್ಟಿದೆ. ರಾಜ್ಯ ಸರಕಾರದ ವತಿಯಿಂದ ಜಾಗೃತಿ ಮಾಹಿತಿ ಪ್ರಸಾರಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ವಿವಿಧ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸಮುದಾಯ ಆರೋಗ್ಯ ವಿಭಾಗದ ಮೂಲಕ ಶಿಬಿರಗಳನ್ನು ಏರ್ಪಡಿಸಿ ತಿಳುವಳಿಕೆ ನೀಡುವ ಅಗತ್ಯವಿದೆ ಎಂದು ಡಾ.ಭರತ್ ಶೆಟ್ಟಿ ಪ್ರತಿಪಾದಿಸಿದರು.

Comments are closed.