ಕರ್ನಾಟಕ

ಕೊಪ್ಪಳದಲ್ಲಿ ಪ್ರಥಮ ಕೊರೊನಾ ಶಂಕಿತ ವ್ಯಕ್ತಿ ಪತ್ತೆ

Pinterest LinkedIn Tumblr


ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಮೊದಲು ಕೊರೊನಾ ವೈರಸ್ ಶಂಕಿತ ವ್ಯಕ್ತಿಯು ಪತ್ತೆಯಾಗಿದ್ದು ಆತನಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌.

ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿ ಸೌದಿ ಅರೇಬಿಯಾದಿಂದ ಕಳೆದ‌ ಫೆ.29ರಂದು ಹೈದ್ರಾಬಾದ್ ಮೂಲಕ ಗಂಗಾವತಿಗೆ ಆಗಮಿಸಿದ್ದಾರೆ. ನಂತರ ಬಾಗಲಕೋಟ, ಲಿಂಗಸಗೂರು, ರಾಯಚೂರುನಲ್ಲಿ ಸಂಚಾರ ಮಾಡಿ ಗಂಗಾವತಿಗೆ ಆಗಮಿಸಿದ್ದಾರೆ.

ಮಾ. 13 ರಿಂದ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದರು. ಜಿಲ್ಲಾಡಳಿತ ಅವರನ್ನು ಜಿಲ್ಲಾಸ್ಪತ್ರೆಯಲ್ಲಿರುವ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲು ಕರೆತರಲಾಗಿದೆ. ಸದ್ಯ ಈ ವ್ಯಕ್ತಿಯ ಕಫ ಪಡೆದು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಪ್ರಸ್ತುತ ಈತನಿಗೆ ಜ್ವರವಿಲ್ಲ. ಆದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈತನಿಗೆ ಕೊರೊನಾ ವೈರಸ್ ದೃಢಪಟ್ಟಿಲ್ಲ ಎಂದು ಡಿಸಿ ಸುನೀಲ್ ಕುಮಾರ ಅವರು ತಿಳಿಸಿದ್ದಾರೆ.

Comments are closed.