ಬೆಂಗಳೂರು: ಕೊರೊನಾ ವೈರಸ್ ಭೀತಿಯ ಸಮಯದಲ್ಲೇ ರಾಜ್ಯದಲ್ಲಿ ಹಲವೆಡೆ ಮಳೆಯಾಗುತ್ತಿದೆ. ಬೆಂಗಳೂರು ಸೇರಿ ಹಲವೆಡೆ ಮಳೆಯಾಗುತ್ತಿದೆ. ಆದರೆ ಈ ಮಳೆ ಬಂದರೆ ತೀರಾ ಅಪಾಯ ಎಂದು ಭೂಗರ್ಭ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಎರಡು ದಿನಗಳಿಂದ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಭಾರೀ ಮಳೆ ಆಗಿದೆ. ಇಂದು ಸಹ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಸಿಲಿಕಾನ್ ಸಿಟಿಯಲ್ಲೂ ಕೂಡ ಮಳೆ ಆರಂಭವಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಅಪಾಯ ಎದುರಾಗಬಹುದು ಎನ್ನುವ ಆತಂಕವನ್ನು ಭೂಗರ್ಭ ಶಾಸ್ತ್ರಜ್ಞ ಪ್ರಕಾಶ್ ಹೊರಹಾಕಿದ್ದಾರೆ.
ಮಳೆಯಲ್ಲಿ ಕೊರೊನಾ ವೈರಸ್ ವ್ಯಾಪಕತೆ ಹೆಚ್ಚಾಗುತ್ತಂತೆ. ಅಲ್ಲದೇ ಮಳೆಯಿಂದ ಭೂಮಿಯಲ್ಲಿ ಈ ವೈರಸ್ ನೆಲೆಗೊಳ್ಳಲು ಬಹು ಸುಲಭ. ಹೀಗಾಗಿ ನೀರಿನಲ್ಲಿ ವೈರಸ್ ಸೇರಿಕೊಂಡು ಕುಡಿಯುವ ನೀರಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಳೆಯಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆಯಿದೆ ಎಂದು ಭೂಗರ್ಭ ತಜ್ಞರು ಹೇಳಿದ್ದಾರೆ.
ಮಳೆ ಬಂದರೆ ವಾತಾವರಣ ತಂಪಾಗಿ, ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತದೆ. ಜೊತೆಗೆ ಈ ವೈರಸ್ ನೀರಿನಲ್ಲಿ ಕೂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಕುಡಿಯುವ ನೀರಿನ ಮೂಲಕವೂ ಈ ವೈರಸ್ ನಮ್ಮ ದೇಹ ಸೇರುವ ಸಾಧ್ಯತೆ ಇದೆ. ಮಳೆಗಾಲದ ಮುಂಚೆಯೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಭೂಗರ್ಭ ಶಾಸ್ತ್ರಜ್ಞ ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಹೆಣ್ಣೂರು, ಮಾನ್ಯತಾ ಟೆಕ್ ಪಾರ್ಕ್, ಸಂಪಿಗೆಹಳ್ಳಿ, ಹೆಗ್ಡೆ ನಗರ ಮತ್ತು ಕೊತ್ತನೂರು ಸುತ್ತಮುತ್ತ ಮಳೆಯಾಗುತ್ತಿದೆ. ಸುಮಾರು ಅರ್ಧ ಗಂಟೆಗಳಿಂದ ಧಾರಾಕಾರ ಮಳೆಯಾಗುತ್ತಿದೆ.
Comments are closed.