ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ 16ನೇ ವಯಸ್ಸಿನಲ್ಲೇ ನಟ ಸಲ್ಮಾನ್ ಖಾನ್ ಅವರ ಜೊತೆ ನಟಿಸಲು ನಿರಾಕರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರದ್ಧಾ, ನಾನು 16ನೇ ವಯಸ್ಸಿನಲ್ಲಿದ್ದಾಗ ಸಲ್ಮಾನ್ ಖಾನ್ ಅವರ ಜೊತೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಆದರೆ ನಾನು ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು ಎಂದು ಈ ಸಿನಿಮಾವನ್ನು ನಿರಾಕರಿಸಿದೆ ಎಂದು ತಿಳಿಸಿದರು.
16ನೇ ವಯಸ್ಸಿನಲ್ಲಿ ನಾನು ಚಿಕ್ಕವಳಾಗಿದೆ. ಮೊದಲು ನಾನು ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಕಾಲೇಜಿಗೆ ಹೋಗಬೇಕು ಎಂದು ಬಯಸಿದ್ದೆ. ಆದರೆ ಸಲ್ಮಾನ್ ಖಾನ್ ಅವರ ಜೊತೆ ನಟಿಸುವ ಅವಕಾಶವನ್ನು ತಿರಸ್ಕರಿಸಿ, ನನ್ನ ವಿದ್ಯಾಭ್ಯಾಸದತ್ತ ಗಮನಹರಿಸಲು ಕಷ್ಟವಾಯಿತು ಎಂದು ಶ್ರದ್ಧಾ ಹೇಳಿದ್ದಾರೆ.
2010ರಲ್ಲಿ ಶ್ರದ್ಧಾ ‘ಟೀನ್ ಪತ್ತಿ’ ಸಿನಿಮಾದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾದಲ್ಲಿ ಬಿಗ್-ಬಿ ಅಮಿತಾಬ್ ಬಚ್ಚನ್, ಮಾದವನ್ ಹಾಗೂ ರೈಮಾ ಸೇನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಶ್ರದ್ಧಾ ಸಾಹೋ, ಆಶಿಕಿ-2, ಏಕ್-ವಿಲನ್, ಹಾಫ್ ಗರ್ಲ್‍ಫ್ರೆಂಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಸದ್ಯ ಕೊನೆಯದಾಗಿ ಶ್ರದ್ಧಾ ‘ಭಾಘಿ-3’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಶ್ರದ್ಧಾಗೆ ನಟ ಟೈಗರ್ ಶ್ರಾಫ್ ನಾಯಕನಾಗಿ ನಟಿಸಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
Comments are closed.