ಆರೋಗ್ಯ

ಕೊರೋನಾ ಭೀತಿ- ಕುಂದಾಪುರ ಶನಿವಾರ ಸಂತೆ ರದ್ದು, ನಾಳೆಯಿಂದ 3 ದಿನ ಸೆಲೂನ್ ಇರಲ್ಲ

Pinterest LinkedIn Tumblr

ಕುಂದಾಪುರ: ಜಿಲ್ಲೆಯ ಅತೀ ದೊಡ್ಡ ಕುಂದಾಪುರ ಶನಿವಾರ ಸಂತೆ ಕರೋನ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದ್ದು. ಹೆಮ್ಮಾಡಿ ಶುಕ್ರವಾರ ಸಂತೆ ಜಿಲ್ಲಾಡಳಿತ ಆದೇಶ ಉಲ್ಲಂಘಿಸಿ ನಡೆಸಲಾಗಿದ್ದು, ಮಧ್ಯಾಹ್ನದ ನಂತರ ಹೆಮ್ಮಾಡಿ ಗ್ರಾಮ ಮಂಚಾಯಿತಿ ಅಧಿಕಾರಿಗಳು ಸಂತೆ ಬಂದ್ ಮಾಡಿಸಿದರು.

ಕೊರೋನಾ ನಿಮಿತ್ತ ಜಿಲ್ಲಾಡಳಿತ  144 ಸೆಕ್ಷನ್ ಜಾರಿ ಮಾಡಿದ್ದು, ಸಂತೆ, ಧಾರ್ಮಿಕ ಕಾರ್‍ಯಕ್ರಮ, ಸಭೆ ಸಮಾರಂಭಗಳಿಗೆ ಕಡಿವಾಣ ಹಾಕಿದೆ. ಕರೋನಿ ತಡೆ ಹಿನ್ನೆಲೆ ಹಾಗೂ ಜಿಲ್ಲಾಡಳಿತದ ಆದೇಶದ ಮೇರೆಗೆ ಕುಂದಾಪುರ ಸಂತೆ ರದ್ದು ಮಾಡಲಾಗಿದ್ದು, ಗೇಟ್ ಬಂದ್ ಮಾಡಿ ಸಂತೆ ರದ್ದು ನಾಮಫಲಕ ಅಳವಡಿಸಲಾಗಿದೆ.

ಕುಂದಾಪುರ ಸಂತೆಗೆ ಶನಿವಾರ ಸಂಜೆಯೇ ಬೇರೆ ಬೇರೆ ಕಡೆಯಿಂದ ವರ್ತಕರು ಹಾಗೂ ಸ್ಥಳೀಯ ಹೊರ ಪ್ರದೇಶದಿಂದ ಬಾಳೆಕಾಯಿ, ಅಡಕೆ ವ್ಯಾಪಾರಸ್ಥರು, ರೈತರು ಸಂಜೆಯೇ ಬರುತ್ತಿದ್ದು, ಈ ಬಾರಿ ಸಂತೆ ಮೈದಾನದಲ್ಲಿ ವ್ಯಾಪಾರಸ್ಥರು ಗ್ರಾಹಕರಿಲ್ಲದೆ ಖಾಲಿಯಾಗಿತ್ತು.
ಹೆಮ್ಮಾಡಿಯಲ್ಲಿ ಇತ್ತೀಚೆಗೆ ಶುಕ್ರವಾರ ಸಂತೆ ಆರಂಭವಾಗಿದ್ದು, ದಾವಣಗೆರೆ, ಶಿವಮೊಗ್ಗ ಜಿಲ್ಲೆಯಿಂದ ತರಕಾರಿ ವ್ಯಾಪಾರಸ್ಥರು ಬಂದು ಶುಕ್ರವಾರ ಹೆಮ್ಮಾಡಿ ಸಂತೆ ಮುಗಿಸಿ, ಶನಿವಾರ ಕುಂದಾಪುರ ಸಂತೆಗೆ ಹೋಗುತ್ತಿದ್ದರು. ಹೆಮ್ಮಾಡಿ ಸಂತೆಗೆ ಸ್ಥಳೀಯರು ಬಂದು ತರಕಾರಿ ಇನ್ನಿತರ ಸಾಮಾನು ಖರೀಸಿದಿರು. ಮಧ್ಯಹ್ನದ ನಂತರ ಹೆಮ್ಮಾಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಪೊಲೀಸ್ ಸಹಕಾರದಲ್ಲಿ ಸಂತೆ ಬಂದ್ ಮಾಡಿದ್ದಾರೆ.

ಮೂರು ದಿನ ಹೇರ್ ಸೆಲೂನ್ ಇರಲ್ಲ
ತಾಲೂಕು ಸವಿತಾ ಸಮಾಜ ಅಧ್ಯಕ್ಷ ಸುಭಾಸ್ ಭಂಡಾರಿ ಗುಜ್ಜಾಡಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಕ್ಷೌರಿಕರ ಸೆಲೂನ್ ೩ ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ.
ದೇಶದ ಪ್ರದಾನ ಮಂತ್ರಿಗಳು ಆದಿತ್ಯವಾರ ದೇಶದಾದ್ಯಂತ ಮನೆಯಿಂದ ಯಾರೂ ಹೊರಗೆ ಹೋಗಬೇಡಿ ಎಂದ ಬೆನ್ನಲ್ಲೆ ಉಡುಪಿ ಜಿಲ್ಲಾ ಸವಿತಾ ಸಮಾಜ ಮತ್ತು ಅದರ ೭ ತಾಲೂಕುಗಳು ಅಧ್ಯಕ್ಷರು,ಸರ್ವ ಸದಸ್ಯರು ತುರ್ತು ಸಭೆ ಕರೆದು ನಿರ್ಧರಿಸಲಾಯಿತು.
ಕುಂದಾಪುರ ಸವಿತಾ ಸಮಾಜ ಕೋಶಾಧಿಕಾರಿ ಮಧುಕರ ಭಂಡಾರಿ ಕೋಟೇಶ್ವರ, ಕುಂದಾಪುರ ಭಂಡಾರಿ ಸಮಾಜದ ಅಧ್ಯಕ್ಷರಾದ ಸುಭಾಸ್ ಭಂಡಾರಿ ಹಂಗ್ಳೂರು, ಕುಂದಾಪುರ ಪರಿಯಾಳ ಸಮಾಜದ ಅಧ್ಯಕ್ಷರಾದ ಮಂಜುನಾಥ ಸಾಲಿಯಾನ್ ತ್ರಾಸಿ, ಗಂಗೋಳ್ಳಿ ಸವಿತಾ ಸಮಾಜ ವಲಯಾಧ್ಯಕ್ಷರಾದ ದಿನೇಶ ಭಂಡಾರಿ, ಬೈಂದೂರು ವಲಯಾಧ್ಯಕ್ಷ ನಾರಾಯಣ ಭಂಡಾರಿ, ಬಸ್ರೂರು ಘಟಕಾಧ್ಯಕ್ಷ ನವೀನ ಭಂಡಾರಿ, ಕೋಟ ವಲಯಾಧ್ಯಕ್ಷ ಪ್ರಶಾಂತ ಭಂಡಾರಿ ಸಾಲಿಗ್ರಾಮ, ಸಮಾಜದ ಹಿರಿಯ ಮಂಜು ಭಂಡಾರಿ, ಅಣ್ಣಯ್ಯ ಸುವರ್ಣ ಉಪಸ್ಥಿತಿರಿದ್ದರು.
ಕಾರ್ಯದರ್ಶಿ ಸುಜಯ್ ಸುವರ್ಣ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು

Comments are closed.