ಕರಾವಳಿ

ಕಂಕನಾಡಿ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಕನಾಡಿ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಇತೀಚಿಗೆ ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಕಂಕನಾಡಿ ವಾರ್ಡಿನ ಕುಂಟಲಗುಡ್ಡೆ ಕೊರಗಜ್ಜ ಗುಡಿ ಬದಿ ರಸ್ತೆ ಅಭಿವೃದ್ಧಿ, ಕುಂಟಲಗುಡ್ಡೆ ಮುಖ್ಯ ರಸ್ತೆಯ ಬದಿ ಚರಂಡಿ ಅಭಿವೃದ್ಧಿ ಕಾಮಗಾರಿ ಹಾಗೂ ಹಿಂದೂ ಯುವಸೇನಾ ಕಚೇರಿಪರ ಬದಿ ಚರಂಡಿ ಅಭಿವೃದ್ಧಿಗೆ ಒಟ್ಟು 19 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದೆ ಸ್ಥಳೀಯ ಮುಖಂಡರ ಮೂಲಕ ಇಲ್ಲಿನ ಸಾರ್ವಜನಿಕರು ಪರಿಸರದ ಸಮಸ್ಯೆಯ ಬಗ್ಗೆ ಮನವಿ ಮಾಡಿದ್ದರು. ಆ ಪ್ರಕಾರ ವಿವಿಧ ಇಲಾಖೆಗಳಿಂದ ಅನುದಾನ ಜೋಡಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು ಎಂದು ಶಾಸಕರು ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಕಿರಣ್ ರೈ, ಭರತ್ ರಾಜ್ ಶೆಟ್ಟಿ, ಲೋಕೇಶ್ ಕುಡ್ತಡ್ಕ, ವಿಕ್ರಮ್ ಶೆಟ್ಟಿ, ಅಶ್ವಥ್, ಮಾನಸ‌ ರೈ, ಹರಿಣಾಕ್ಷಿ, ಶೀಲ ಉಮಾನಾಥ್, ಯಶೋಧಾ, ಭಾರತಿ, ತಿಮ್ಮಪ್ಪ, ಶುಭಂ, ಆಶಿತ್ ಕುಲಾಲ್,ಸಂದೇಶ್ ಕಾವುಬೈಲ್, ಉಮಾನಾಥ್, ಸರೋಜಿನಿ, ಶೋಭಾ ಪ್ರಭಾಕರ್, ಲತೀಶ್, ಫ್ರಾನ್ಸಿಸ್, ನಿರ್ಮಲ, ರಾಜೇಶ್, ಸುರೇಶ್, ಪ್ರಜ್ವಲ್, ರೇಶ್ಮಾ, ರಂಜಿತ್, ಕಾಂತಪ್ಪ, ಆನಂದ್, ಶರತ್, ದೇವೇಂದ್ರ, ಪುಷ್ಪಾವತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Comments are closed.