ಕರಾವಳಿ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ದ.ಕ ಜಿಲ್ಲಾ ಶಾಖೆಯ ವತಿಯಿಂದ ಕೊರೊನಾ ವೈರಸ್ ಕುರಿತು ಜಾಗೃತಿ ಅಭಿಯಾನ

Pinterest LinkedIn Tumblr

ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ದ.ಕ ಜಿಲ್ಲಾ ಶಾಖೆಯ ವತಿಯಿಂದ ಕೊರೊನಾ ವೈರಸ್ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅರಿವು ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ಸಿದ್ದಪಡಿಸಿದ ಕರಪತ್ರಗಳನ್ನು ವಿತರಿಸಲಾಗುವುದು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ ಜಿಲ್ಲಾ ಶಾಖೆಯ ಚೇರ್‌ಮೆನ್ ಸಿ‌ ಎ. ಶಾಂತರಾಮ ಶೆಟ್ಟಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 230 ಗ್ರಾಮ ಪಂಚಾಯತ್‌ಗಳಲ್ಲಿ ಕೊರೊನಾ ನಿಯಂತ್ರಣ ಕ್ರಮಗಳ ಕುರಿತ ಕರಪತ್ರ ಮನೆ ಮನೆಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ದೇಶದ 29 ರಾಜ್ಯ ಮತ್ತು ಎಲ್ಲ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾವಿರಾರು ಯುವಕರಿಗೆ ಕೊರೊನಾ ಜನಜಾಗೃತಿ ಮೂಡಿಸುವ ಕುರಿತು ತರಬೇತಿ ನೀಡಿದ್ದು, ಮಾ.೨೨ ರಂದು ಜನತಾ ಕರ್ಫ್ಯೂನಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ತಿಳಿಸಿದ್ದಾರೆ.

ವೈಸ್ ಚೇರ್‌ಮೆನ್ ಶ್ರೀ. ಬಿ. ನಿತ್ಯಾನಂದ ಶೆಟ್ಟಿ, ಗೌರವ ಖಚಾಂಚಿ ಶ್ರೀ. ಆರ್ಚಿಬಾಲ್ಡ್ ಮೆನೇಜಸ್, ಗೌರವ ಕಾರ್ಯದರ್ಶಿ ಶ್ರೀ. ಎಸ್.ಎ ಪ್ರಭಾಕರ ಶರ್ಮ, ಆಡಳಿತ ಮಂಡಳಿ ಸದಸ್ಯರಾದ ಶ್ರೀ. ಯತೀಶ್ ಬೈಕಂಪಾಡಿ ಮತ್ತು ಇವರ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Comments are closed.