ಅಂತರಾಷ್ಟ್ರೀಯ

ಕೊರೋನಾ: ಇಟಲಿಯಲ್ಲಿ ಒಂದೇ ದಿನ 793 ಮಂದಿ ಬಲಿ; ಸಾವಿನ ಸಂಖ್ಯೆ 4825ಕ್ಕೆ ಏರಿಕೆ

Pinterest LinkedIn Tumblr


ಕೊರೋನಾ ಮಹಾಮಾರಿ ಇಟಲಿಯಲ್ಲಿ ಮರಣ ಮೃದಂಗ ಬಾರಿಸುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ನಿನ್ನೆ (ಶನಿವಾರ) ಒಂದೇ ದಿನ 793 ಮಂದಿ ಕೊರೋನಾಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4825ಕ್ಕೆ ಏರಿಕೆಯಾಗಿದೆ. ಈ ಸಾಂಕ್ರಾಮಿಕ ರೋಗ ಹರಡಲು ಶುರುವಾದಾಗಿನಿಂದ ಅತಿದೊಡ್ಡ ಪ್ರಮಾಣದಲ್ಲಿ ಸಾವನ್ನಪ್ಪಿರುವುದು ನಿನ್ನೆ.

ಕಳೆದ ಗುರುವಾರ ಇಟಲಿ ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿತ್ತು. ಅಲ್ಲಿ ಅತೀ ಹೆಚ್ಚು ಸಾವು ಸಂಭವಿಸಿವೆ.

ಇಟಲಿಯಲ್ಲಿ ಈವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 53,578 ಮಂದಿ. ಈ ಹಿಂದೆ 47,021 ಮಂದಿ ಮೃತಪಟ್ಟಿದ್ದರು. ಈಗ ಸಾವಿನ ಸಂಖ್ಯೆ ಶೇ.13.9ರಷ್ಟು ಏರಿಕೆಯಾಗಿದೆ ಎಂದು ನಾಗರಿಕ ಸುರಕ್ಷತಾ ಏಜೆನ್ಸಿ ತಿಳಿಸಿದೆ.

ಇಟಲಿಯ ಲೋಂಬಾರ್ಡಿ ಪ್ರಾಂತ್ಯದಲ್ಲಿ ಕೊರೋನಾ ವೈರಸ್​​ಗೆ ಅತಿ ಹೆಚ್ಚಿನ ಜನರು ಬಲಿಯಾಗಿದ್ದಾರೆ. ಅಲ್ಲಿ ತುಂಬಾ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಪ್ರಾಂತ್ಯದಲ್ಲಿ ಈವರೆಗೆ ಒಟ್ಟು 3,095 ಜನರು ಸಾವನ್ನಪ್ಪಿದ್ದರೆ, 25,515 ಪ್ರಕರಣಗಳು ಪತ್ತೆಯಾಗಿವೆ.

ಈ ಮಾರಣಾಂತಿಕ ಕೊರೋನಾ ವೈರಸ್​​ ವಿಶ್ವಾದ್ಯಂತ ಕ್ಷಿಪ್ರ ವೇಗದಲ್ಲಿ ಹರಡುತ್ತಿದೆ. ಈ ಸೋಂಕಿಗೆ ಒಳಗಾದವರಲ್ಲಿ 6,072 ಮಂದಿ ಚೇತರಿಸಿಕೊಂಡಿದ್ದಾರೆ.

Comments are closed.