ಸ್ಪೇನ್: ಕೋವಿಡ್-19 ವೈರಸ್ ಮಹಾಮಾರಿ ಸೋಂಕಿನ ಚಿಕಿತ್ಸೆ ಫಲಕಾರಿಯಾಗದೆ ರಿಯಲ್ ಮ್ಯಾಡ್ರಿಡ್ ಮಾಜಿ ಅಧ್ಯಕ್ಷ ಲೋರೆನ್ ಝೋ ಸ್ಯಾನ್ಝ್ (76ವರ್ಷ) ಸಾವನ್ನಪ್ಪಿರುವುದಾಗಿ ಪುತ್ರ ಭಾನುವಾರ ತಿಳಿಸಿದ್ದಾರೆ.
ರಿಯಲ್ ಮ್ಯಾಡ್ರಿಡ್ ಮೂಲದ ಸ್ಪೇನ್ ಫುಟ್ಬಾಲ್ ಕ್ಲಬ್ ಇದಾಗಿದೆ. 1995ರಿಂದ 2000ವರೆಗೆ ಸ್ಯಾನ್ಝ್ ಫುಟ್ಬಾಲ್ ಕ್ಲಬ್ ನ ಅಧ್ಯಕ್ಷರಾಗಿದ್ದರು. ನನ್ನ ತಂದೆ ವಿಧಿವಶರಾಗಿದ್ದಾರೆ, ಇದೊಂದು ಆಘಾತಕಾರಿ ವಿಷಯ ಎಂದು ಪುತ್ರ ಲೋರೆ ನ್ ಝೋ ಸ್ಯಾನ್ಝ್ ಜ್ಯೂನಿಯರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕೋವಿಡ್-19 ವೈರಸ್ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ವಿಧಿವಶರಾಗಿದ್ದರು ಎಂದು ಜ್ಯೂನಿಯರ್ ಸ್ಯಾನ್ಝ್ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ. ಸ್ಪೇನ್ ನಲ್ಲಿ ಕೋವಿಡ್ 19ಗೆ 1,300ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
Comments are closed.