ಮನೋರಂಜನೆ

ಸೋನಂ ಕಪೂರ್ ಕುರಿತು ಹಬ್ಬಿತೊಂದು ಗಾಸಿಪ್

Pinterest LinkedIn Tumblr


ಬಾಲಿವುಡ್ ನಟಿ ಸೋನಂ ಕಪೂರ್ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್ ಗಾಯಕಿ ಕನಿಕಾ ಕಪೂರ್‌‍ಗೆ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದ್ದು, ಈಗ ಅವರು ಲಖನೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪರವಾಗಿ ಸೋನಂ ಬ್ಯಾಟಿಂಗ್ ಬೀಸಿ, ಟ್ರೋಲ್ ಆಗಿದ್ದರು. ಮೇ 8, 2018ರಲ್ಲಿ ಆನಂದ್ ಅಹುಜಾರನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲದಿನಗಳ ಹಿಂದೆ ತಂದೆ ಅನಿಲ್ ಕಪೂರ್ ಜೊತೆ ಅಸಭ್ಯವಾದ ಡ್ರೆಸ್‌ ಧರಿಸಿ ನೆಟ್ಟಿಗರಿಂದ ಉಗಿಸಿಕೊಂಡಿದ್ದರು. ಈಗ ಅವರು ಗರ್ಭಿಣಿ ಎಂಬ ಸುದ್ದಿ ಹರಿದಾಡುತ್ತಿದೆ.

ಸೋನಂ ಕಪೂರ್ ಮನೆಯಲ್ಲಿ ಧರಿಸಿದ್ದ ಉಡುಪನ್ನು ಧರಿಸಿದ್ದಾರೆ. ಇದನ್ನು ನೋಡಿ ಕೆಲವರು ಸೋನಂ ಗರ್ಭಿಣಿ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮನೆಯ ಅಂಗಳದಲ್ಲಿರುವ ಅತ್ತೆ ಜೊತೆ ಮನೆ ಮೇಲ್ಗಡೆ ಫ್ಲೋರ್‌ನಿಂದ ಸೋನಂ ಮಾತನಾಡುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸೋನಂ ಕಪೂರ್

ಹಿಂದೊಮ್ಮೆ ಇವರು ಗರ್ಭಿಣಿ ಎಂಬ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಸೋನಂ ಅದನ್ನು ನಿರಾಕರಿಸಿದ್ದರು. “ಈ ಬಗ್ಗೆ ನಾನು ನನ್ನ ಗಂಡ ಸುದೀರ್ಘವಾಗಿ ಚರ್ಚಿಸಿಕೊಂಡಿದ್ದೇವೆ. ಕೊನೆಗೂ ಮಗು ಬೇಕೆ ಬೇಕಲ್ಲವೇ” ಎಂದು ಹೇಳಿದ್ದರು.

ಸದಾ ಜೀನ್ಸ್, ಟೈಟ್ ಔಟ್‍ಫಿಟ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಸೋನಂ ಕಪೂರ್ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ತುಂಬ ಸಡಿಲವಾದ ಹಳದಿ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಹೈ ಹೀಲ್ಡ್ ಚಪ್ಪಲಿ ಧರಿಸದೆ, ನಿಧಾನಕ್ಕೆ ನಡೆಯುತ್ತಾ ಬರುವುದನ್ನು ನೋಡಿದ ನೆಟ್ಟಿಗರು ಬಹುಶಃ ಸೋನಂ ಮಗುವಿನ ನಿರೀಕ್ಷೆಯಲ್ಲಿರಬಹುದು ಎಂದು ಕಾಮೆಂಟ್ ಮಾಡಿದ್ದರು. ಈ ವಿಷಯ ತುಂಬ ಚರ್ಚೆಯಾಗಿತ್ತು.

Comments are closed.