ಉಡುಪಿ: ಕೋವಿಡ್ 19 ಕೊರೋನಾ ರೋಗ ಲಕ್ಷಣದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮತ್ತೆ 16 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಪೈಕಿ ಜಪಾನ್,ಜೀನತ್ (ಸೌದಿ),ಸೌದಿ ಅರೇಬಿಯಾ, ಸಿಂಗಾಪುರ, ಅಬುಧಾಬಿ, ಮಸ್ಕತ್ಗಳಿಂದ ಬಂದ 6 ಮಂದಿ, ಮುಂಬಯಿ 3, ತೆಲಂಗಾಣದಿಂದ ಒಬ್ಬರು, ಇತರ 6 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಡುಪಿಯಲ್ಲಿ 11, ಕುಂದಾಪುರದಲ್ಲಿ 2 ಹಾಗೂ ಕಾರ್ಕಳದಲ್ಲಿ 3 ಮಂದಿ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಂದು 61 ಮಂದಿ ಸೇರಿದಂತೆ ಈವರೆಗೆ ಒಟ್ಟು 448 ಮಂದಿ ಕೊರೋನೊ ವೈರಸ್ ತಪಾಸಣೆಗೊಳಗಾಗಿದ್ದು, ಇವರಲ್ಲಿ 26 ಮಂದಿ 28 ದಿನಗಳ ತ್ರೀವ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇಂದು 22 ಮಂದಿ ಸೇರಿದಂತೆ ಒಟ್ಟು 320ಮಂದಿ ಗೃಹ ನಿಗಾದಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ. ಒಟ್ಟಾರೆ ಈವರೆಗೆ ಜಿಲ್ಲೆಯಲ್ಲಿ 26 ಮಂದಿ ಶಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ. ಶನಿವಾರ ರಾತ್ರಿಯಿಂದ ಶಿರೂರು ಮತ್ತು ಪಡುಬಿದ್ರಿ ಚೆಕ್ಪೋಸ್ಟ್ಬಳಿ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
Comments are closed.