ಬೆಂಗಳೂರು: ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕಾದ ವ್ಯಕ್ತಿ ಸಾರ್ವಜನಿಕವಾಗಿ ಓಡಾಡಿದರೆ ಅವರ ವಿರುದ್ಧ ಐಪಿಸಿ ಸೆಕ್ಷನ್ 269(ಜೀವಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು) ಅಡಿ ಕೇಸ್ ದಾಖಲಾಗಲಿದೆ.
ಸಾರ್ವಜನಿಕವಾಗಿ ಸಂಚರಿಸಬಾರದು ಎಂದು ತಿಳಿದಿದ್ದರೂ ಈ ಕೃತ್ಯ ಎಸಗಿದರೆ ಗರಿಷ್ಠ ಆರು ತಿಂಗಳ ಶಿಕ್ಷೆ ಅಥವಾ ದಂಡ ಅಥವಾ ದಂಡ ಹಾಗೂ ಶಿಕ್ಷೆ ಎರಡನ್ನು ವಿಧಿಸಲು ಅವಕಾಶವಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಈಗಾಗಲೇ 5 ಸಾವಿರಕ್ಕೂ ಹೆಚ್ಚು ಮಂದಿ ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ. ವಿದೇಶದಿಂದ ಆಗಮಿಸಿ ಗೃಹಬಂಧನದಲ್ಲಿ ಇರಬೇಕಾದ ವ್ಯಕ್ತಿಗಳು ಬಿಎಂಟಿಸಿ ಬಸ್ಸಿನಲ್ಲಿ ಸಂಚರಿಸುತ್ತಿರುವ ಬಗ್ಗೆ ದೂರು ಬಂದಿದೆ. ಈ ವ್ಯಕ್ತಿಗಳು ಕಂಡು ಬಂದರೆ ದಯವಿಟ್ಟು 100ಕ್ಕೆ ಕರೆ ಮಾಡಿ ತಿಳಿಸಿ. ಅವರನ್ನು ನಮ್ಮ ಸಿಬ್ಬಂದಿ ಹಿಡಿದು ಬಂಧಿಸಿ ಸರ್ಕಾರಿ ಕ್ವಾರಂಟೈನ್ ನಲ್ಲಿ ಇಡುತ್ತಾರೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಹೋಮ್ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಕೈಗೆ ಸೀಲ್ ಹಾಕಲಾಗುತ್ತದೆ. ಭಾರತ ಚುನಾವಣಾ ಆಯೋಗ ಚುನಾವಣೆಯಲ್ಲಿ ಬಳಸುವ ಶಾಯಿಯ ಸೀಲ್ ಇದಾಗಿದ್ದು 21 ದಿನಗಳ ಕಾಲ ವ್ಯಕ್ತಿ ಕೈಯಲ್ಲಿ ಇರುತ್ತದೆ.
Comments are closed.