ನ್ಯೂಯಾರ್ಕ್: ಭಾರತ ಮೂಲದ ಅಂತಾರಾಷ್ಟ್ರೀಯ ಬಾಣಸಿಗ ಫ್ಲಾಯ್ಡ್ ಕಾರ್ಡೋಸ್ ಅಮೆರಿಕಾದಲ್ಲಿ ಕರೋನ ವೈರಸ್ಸಿಗೆ ಬಲಿಯಾಗಿದ್ದಾರೆ.
ಫ್ಲಾಯ್ಡ್ ಕಾರ್ಡೋಸ್ ನ್ಯೂಯಾರ್ಕ್ನ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು ಎಂದು ಅವರ ಕುಟುಂಬದವರು ದೃಢಪಡಿಸಿದ್ದಾರೆ.
ಮುಂಬೈನಲ್ಲಿ ಬಾಂಬೆ ಕ್ಯಾಂಟೀನ್, ಒ ಪ್ರೆಡೋ ಮತ್ತು ಬಾಂಬೆ ಸ್ವೀಟ್ ಶಾಪ್ ಎಂಬ ಮೂರು ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದ್ದ ಫ್ಲಾಯ್ಡ್ ಕಾರ್ಡೋಸ್, ಹಂಗರ್ ಇಂಕ್‌ನ ಸಹ-ಮಾಲೀಕರಾಗಿದ್ದರು.
https://www.instagram.com/p/B92S1FunVEX/?utm_source=ig_embed
ಫ್ಲಾಯ್ಡ್ ಕಾರ್ಡೋಸ್ ನ್ಯೂಯಾರ್ಕ್‌ನಲ್ಲಿ ಕೋವಿಡ್ -19 ಸೋಂಕಿಗೆ ಬಲಿಯಾಗಿದ್ದು, ಅವರನ್ನು ಸಂಪರ್ಕಿಸಿದ ಎಲ್ಲ ಜನರನ್ನು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಮೃತರು ತಾಯಿ ಬೆರಿಲ್, ಪತ್ನಿ ಬರ್ಖಾ ಮತ್ತು ಅವರ ಇಬ್ಬರು ಪುತ್ರರಾದ ಜಸ್ಟಿನ್ ಮತ್ತು ಪೀಟರ್ ಅವರನ್ನು ಅಗಲಿದ್ದಾರೆ.
ಫ್ಲಾಯ್ಡ್ ಕಾರ್ಡೋಸ್ ಮುಂಬೈನಲ್ಲಿ ಜನಿಸಿದ್ದು, ಮಾರ್ಚ್ 8 ರವರೆಗೆ ನಗರದಲ್ಲಿದ್ದರು. ಮಾರ್ಚ್ 18 ರಂದು ಕರೋನ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ನ್ಯೂಯಾರ್ಕ್ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಫ್ಲಾಯ್ಡ್ ಕಾರ್ಡೋಸ್ ಸಾವನ್ನಪ್ಪಿದ್ದಾರೆ.
Comments are closed.