ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಇಂದು ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿದೆ.
ಬೆಂಗಳೂರಿನ ಇಬ್ಬರಿಗೆ ಮೈಸೂರು, ಚಿಕ್ಕಬಳ್ಳಾಪುರದ ತಲಾ ಒಬ್ಬರಿಗೆ ಇಂದು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 55ಕ್ಕೇರಿದೆ.
ಅಚ್ಚರಿ ಎಂದರೆ ಯಾವುದೇ ವಿದೇಶ ಪ್ರಯಾಣ ಮಾಡಿರದ ಹಾಗೂ ವಿದೇಶದಿಂದ ಬಂದ ಯಾವ ವ್ಯಕ್ತಿಗಳ ಜತೆ ನೇರ ಸಂಪರ್ಕ ಹೊಂದಿರದ ಮೈಸೂರು ಮೂಲದ 35 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಈತ ನಂಜನಗೂಡಿನ ಔಷದ ಕಾರ್ಖಾನೆಯಲ್ಲಿ ಗುಣನಿಯಂತ್ರಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ವೈದ್ಯಕೀಯ ತಜ್ಞರೊಂದಿಗೆ ಸಂಪರ್ಕ ಹೊಂದಿದ್ದ ಎಂದು ತಿಳಿದು ಬಂದಿದ್ದು, ವೈದ್ಯಕೀಯ ತನಿಖೆ ಕೈಗೊಳ್ಳಲಾಗಿದೆ. ಇನ್ನು ಈತನಿಗೆ ಮೈಸೂರು ನಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದ ಏಳು ಜನರನ್ನು ಗುರುತಿಸಿ ಪ್ರತ್ಯೇಕ ನಿಗಾದಲ್ಲಿ ಇಡಲಾಗಿದೆ.
ಇಂದಿನ ಬಾಕಿ ಮೂರು ಮಂದಿ ಸೋಂಕಿತರ ಪೈಕಿ ಆಫೀಸ್ / ಮನೆಯ ಸೆಕ್ಯುರಿಟಿ ಗಾರ್ಡ್, ಪ್ರಾನ್ಸ್ ಪ್ರವಾಸ ಮಾಡಿದ್ದ ಆಂದ್ರ ಮೂಲದ 64 ವರ್ಷದ ವ್ಯಕ್ತಿ ಹಾಗೂ ನಿನ್ನೆ ಸಾವಿಗೀಡಾಗಿದ್ದ ಚಿಕ್ಕಬಳ್ಳಾಪುರದ 70 ವರ್ಷದ ಮಹಿಳೆಯಾಗಿದ್ದಾರೆ.
Comments are closed.