ಅಂತರಾಷ್ಟ್ರೀಯ

ಚೀನಾದ ಹುಬೆಯಲ್ಲಿ ಎರಡು ತಿಂಗಳ ನಂತರ ಲಾಕ್ ಡೌನ್ ಸಡಿಲಿಕೆ- ಹಿಂಸಾಚಾರ, ಸಾಮೂಹಿಕ ವಲಸೆ

Pinterest LinkedIn Tumblr


ಬೀಜಿಂಗ್: ಕೋವಿಡ್ 19 ತವರು ಎನ್ನಿಸಿಕೊಂಡ ಚೀನಾದ ಹುಬೈ ಪ್ರಾಂತ್ಯದಲ್ಲಿ ಬರೋಬ್ಬರಿ ಎರಡು ತಿಂಗಳ ಬಳಿಕ ಚೀನಾ ಸರ್ಕಾರ ಎರಡು ತಿಂಗಳ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಿದ ಬೆನ್ನಲ್ಲೇ ಸಾವಿರಾರು ಮಂದಿ ಹುಬೈ ಪ್ರಾಂತ್ಯ ತೊರೆಯಲು ಮುಂದಾಗಿದ್ದು, ಇದರಿಂದಾಗಿ ಹಿಂಸಾಚಾರ, ಅಪಾರ ಜನಸಂದಣಿಯಿಂದ ಟ್ರಾಫಿಕ್ ಜಾಮ್, ರೈಲು ಸಂಚಾರದಲ್ಲಿಯೂ ಜನ ತುಂಬಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಕೆನಡಾ ಮಾಧ್ಯಮಗಳಾದ ದ ಗ್ಲೋಬ್ ಮತ್ತು ಮೇಲ್ ಪ್ರಕಾರ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದ್ದು, ಹುಬೈ ಪ್ರಾಂತ್ಯ ಮತ್ತು ನೆರೆಯ ಜಿಯಾಂಕ್ಸಿ ಪ್ರಾಂತ್ಯವನ್ನು ಸಂಪರ್ಕಿಸುವ ಸೇತುವೆ ಸ್ಥಳದಲ್ಲಿ ಮಾರಾಮಾರಿ ನಡೆದಿದೆ ಎಂದು ತಿಳಿಸಿದೆ.

ಬ್ಯಾರಿಕೇಡ್ ಗಳನ್ನು ತೆರವುಗೊಳಿಸುವಂತೆ ಜನರು ಕೂಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಸೇರಿರುವ ಜನರು ಮತ್ತು ಪೊಲೀಸರ ನಡುವೆ ಹೊಯ್ ಕೈ ನಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ ಎಂದು ವರದಿ ವಿವರಿಸಿದೆ.

ಹುಬೈ ಪ್ರಾಂತ್ಯದಿಂದ ಜಿಯಾಂಕ್ಸಿ ಪ್ರಾಂತ್ಯಕ್ಕೆ ತೆರಳಲು ಜನರನ್ನು ತಡೆದ ಪರಿಣಾಮ ಗಲಭೆ ಆರಂಭವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Comments are closed.