ಕರಾವಳಿ

ಇಂದಿನಿಂದ ಸಾರ್ವಜನಿಕರಿಗೆ ಸೆಂಟ್ರಲ್ ಮಾರ್ಕೆಟ್‌ ಪ್ರವೇಶ ನಿರ್ಬಂಧ : ರಾತ್ರಿ 11ರಿಂದ ವ್ಯಾಪಾರಸ್ಥರಿಗೆ ಮಾತ್ರ ಖರೀದಿಗೆ ಅವಕಾಶ

Pinterest LinkedIn Tumblr

ಮಂಗಳೂರು, ಎಪ್ರಿಲ್.01 : ಎ.1ರಿಂದ ಸೆಂಟ್ರಲ್ ಮಾರ್ಕೆಟ್‌ನ ಬಳಕೆ ಹೋಲ್‌ಸೇಲ್ ವ್ಯಾಪಾರಿಗಳಿಗೆ ಮಾತ್ರ ನಿಗದಿ ಪಡಿಸಲಾಗಿದ್ದು, ಸೆಂಟ್ರಲ್ ಮಾರ್ಕೆಟ್‌ನ್ನು ಹೋಲ್‌ಸೇಲ್ ವ್ಯಾಪಾರಸ್ಥರು ಮಾತ್ರ ಬಳಸಬೇಕು. ರಾತ್ರಿ 11ರಿಂದ ಮುಂಜಾನೆ 4 ಗಂಟೆಯ ಒಳಗೆ ತಮ್ಮ ವ್ಯವಹಾರವನ್ನು ಮುಗಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಆದೇಶ ಹೊರಡಿಸಿ ದ್ದಾರೆ.

ಸೆಂಟ್ರಲ್ ಮಾರ್ಕೆಟ್‌ನಲ್ಲಿ ರಾತ್ರಿ ವೇಳೆ ಚಿಲ್ಲರೆ ವ್ಯಾಪಾರಿಗಳು ಹೋಲ್‌ಸೇಲ್ ವ್ಯಾಪಾರಿಗಳ ಬಳಿ ಖರೀದಿ ಮಾಡಬೇಕು. ಆದರೆ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಚಿಲ್ಲರೆ ವ್ಯಾಪಾರಿಗಳಿಗೆ ಖರೀದಿಗೆ ಅನುಮತಿ‌ ಇರುವುದಿಲ್ಲ.

ಮಾರ್ಕೆಟ್ ವ್ಯಾಪಾರಿಗಳಿಗೆ ಜಿಲ್ಲಾಡಳಿತದಿಂದ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಸೆಂಟ್ರಲ್ ಮಾರ್ಕೆಟ್‌ನ ಒಳಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಗ್ರಾಹಕರು ನಗರದ ವಿವಿದೆಡೆ ಇರುವ ದಿನಸಿ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಬೇಕು ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಸುರತ್ಕಲ್‌ನ ಮಾರುಕಟ್ಟೆ ಸಂಪೂರ್ಣ ಸ್ಥಗಿತ;

ಎಪ್ರಿಲ್ 1ರಿಂದ ಸುರತ್ಕಲ್‌ನ ಮಾರುಕಟ್ಟೆ ಕೂಡ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಸುರತ್ಕಲ್ ಮಾರ್ಕೆಟ್‌ನ ವ್ಯಾಪಾರಿಗಳಿಗೂ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಸುರತ್ಕಲ್ ಮಾರ್ಕೆಟ್ ವ್ಯಾಪಾರಿಗಳಿಗೆ ಬೆಳಗ್ಗೆ 7ರಿಂದ 12ರವರೆಗೆ ಪರ್ಯಾಯ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ಯಾವುದೇ ಕಾರಣಕ್ಕೆ ಭಯಪಡಬೇಕಾದ ಅವಶ್ಯಕತೆಯಿಲ್ಲ. ಪ್ರತೀದಿನ ದಿನಸಿ, ತರಕಾರಿ ಅಂಗಡಿಗಳು ಬೆಳಗ್ಗೆ 7ರಿಂದ 12 ರವರೆಗೆ ತೆರೆದಿರುತ್ತವೆ. 12 ಗಂಟೆಯ ಬಳಿಕ ಎಲ್ಲಾ ಅಂಗಡಿ,ಮಳಿಗೆಗಳು ಬಂದ್ ಮಾಡಬೇಕು. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಹಕಾರ ನೀಡಬೇಕು ಎಂದು ಮಂಗಳೂರು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆಅವರು ಮನವಿ ಮಾಡಿದ್ದಾರೆ.

Comments are closed.