ಕರಾವಳಿ

ಹೋಮ್ ಕ್ವಾರಂಟೈನ್ ಉಲ್ಲಂಘನೆ: ಸಾಸ್ತಾನದ 20 ವರ್ಷದ ಯುವಕನ ವಿರುದ್ದ ಕೋಟ ಠಾಣೆಯಲ್ಲಿ FIR

Pinterest LinkedIn Tumblr

ಕುಂದಾಪುರ: ಕೋವಿಡ್19 ಕೊರೋನಾ ವೈರಸ್ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಹೋಮ್ ಕ್ವಾರಂಟೈನ್​ನಲ್ಲಿರಸಲು ಸೂಚನೆ ನೀಡಿದ್ದರೂ ಕೂಡ ಉಡುಪಿ‌ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಾದ 20 ವರ್ಷ ಪ್ರಾಯದ ಯುವಕನನ್ನು ಸಾಸ್ತಾನ ಗುಂಡ್ಮಿ ನಿವಾಸಿ ಎಂದು ಗುರುತಿಸಲಾಗಿದೆ.

ಕೋವಿಡ್‌-19 (ಕೊರೊನಾ ವೈರಾಣು ಖಾಯಿಲೆ-2019) ಖಾಯಿಲೆಯು ವ್ಯಾಪಕವಾಗಿ ಹರಡದಂತೆ ರಾಜ್ಯ ಸರ್ಕಾರವು ಮಾರ್ಚ್ 24 ರಿಂದ ಲಾಕ್‌ ಡೌನ್‌ ಆದೇಶ ಹೊರಡಿಸಿದ್ದು, ಸರ್ಕಾರದ ಆದೇಶವನ್ನು ಕಾಪಾಡಲು ಏ. 1 ರಂದು ಕೋಟ ಪಿಎಸ್ಐ ನಿತ್ಯಾನಂದ ಗೌಡ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪ್‌ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಹೋಮ್‌ ಕ್ವಾರಂಟೆನ್‌ ಇರುವ ವ್ಯಕ್ತಿ ಕೋಡಿ ಕನ್ಯಾನ ರಸ್ತೆಯಲ್ಲಿ ಸ್ಕೂಟಿಯಲ್ಲಿ ತಿರುಗುತ್ತಿರುವುದು ಕಂಡು ಬಂದಿದೆ.

ಈತನನ್ನು ಸಾಸ್ತಾನ ಮೀನು ಮಾರ್ಕೆಟ್‌ ಸಮೀಪ ನಿತ್ಯಾನಂದ ಗೌಡ ಅವರು ಪ್ರಶ್ನಿಸಿ ಸರ್ಕಾರದ ಆದೇಶದ ಬಗ್ಗೆ ತಿಳಿಸಿದಾಗ ಅಸಂಬದ್ದವಾಗಿ ಉಢಾಪೆಯಾಗಿ ವರ್ತಿಸಿದ್ದು, “ಹೋಮ್‌ ಕ್ವಾರಂಟೆನ್‌“ ಆದೇಶ ಇರುವವರಿಗೆ ಸರ್ಕಾರಿ ಸಿಬ್ಬಂದಿಯವರಿಂದ ಹಾಕಿರುವ ಶೀಲ್‌ ಆತನ ಕೈ ಮೇಲಿರುವುದು ಕಂಡು ಬಂದಿದೆ.

ಹೋಮ್‌ಕ್ವಾರಂಟೆನ್‌ವ್ಯಕ್ತಿಯು ಅಪಾಯಕಾರಿ ಕೋವಿಡ್‌-19 ಖಾಯಿಲೆಯ ಬಗ್ಗೆ ತಿಳಿದೂ ಸಹ ನಿರ್ಲಕ್ಷತನದಿಂದ ಸಾಂಕ್ರಾಮಿಕ ರೋಗವನ್ನು ಹರಡುವ ಉದ್ದೇಶದಿಂದ ದ್ವೇಷ ಭಾವನೆ ತೋರಿ ಪ್ರಯಾಣ ಮುಂದುವರೆಸಿ ಸಾರ್ವಜನಿಕವಾಗಿ ತಿರುಗಾಡಿಕೊಂಡು ಸಾಂಕ್ರಾಮಿಕ ಕಾಯಿಲೆಯನ್ನು ಹರಡುವ ಸಾಧ್ಯತೆ ಕಂಡು ಬಂದಿರುವುದರಿಂದ ಆರೋಪಿ ಮತ್ತು ಆತನು ಸವಾರಿ ಮಾಡಿಕೊಂಡಿದ್ದ ಸ್ಕೂಟಿ ಸಮೇತ ವಶಕ್ಕೆ ಪಡದುಕೊಂಡು ಪ್ರಕರಣ ದಾಖಲಿಸಿದ್ದು ಈತನ ವಿರುದ್ದ ಕೋಟ ಠಾಣೆಯಲ್ಲಿ ಐಪಿಸಿ ಕಲಂ 188, 270, 271 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಈತನ ಬಳಸುತ್ತಿದ್ದ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ

Comments are closed.