ಮುಂಬೈ: ಐಸೋಲೇಶನ್ ವಾರ್ಡ್ ನಲ್ಲಿರುವ ಮಾರಕ ಕೋವಿಡ್ 19 ವೈರಸ್ ಪೀಡಿತರಿಗೆ ಆಹಾರ, ಮೆಡಿಸಿನ್ ಸರಬರಾಜು ಮಾಡಲು ಹಾಗೂ ಸಾಂಕ್ರಾಮಿಕ ರೋಗದ ವೇಸ್ಟ್ (ಕಸ) ಅನ್ನು ಸಂಗ್ರಹಿಸಲು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ ಸಂಶೋಧಕರು ಎರಡು ರೋಬೋಟ್ ತಯಾರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಈ ರೋಬೋಟ್ ನಿಂದ ಐಸೋಲೇಶನ್ ವಾರ್ಡ್ ಗಳಲ್ಲಿ ಮನುಷ್ಯರ ಕಾರ್ಯ ಚಟುವಟಿಕೆಯನ್ನು ಕಡಿಮೆ ಮಾಡಲಿದೆ ಎಂಬುದು ಗುವಾಹಟಿ ಐಐಟಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಅನಿಸಿಕೆಯಾಗಿದೆ.
“ನಾವು ಎರಡು ರೋಬೋಟ್ ಗಳನ್ನು ಅಭಿವೃದ್ದಿಪಡಿಸುತ್ತಿದ್ದೇವೆ. ಒಂದು ಐಸೋಲೇಶನ್ ವಾರ್ಡ್ ಗಳಲ್ಲಿ ಮೆಡಿಸಿನ್ ಮತ್ತು ಆಹಾರ ಸರಬರಾಜು ಮಾಡಲು. ಮತ್ತೊಂದು ಐಸೋಲೇಶನ್ ವಾರ್ಡ್ ಗಳಲ್ಲಿ ಇರುವ ಸೋಂಕಿತರಿಗೆ ಚಿಕಿತ್ಸೆ ನೀಡಿ ಎಸೆದ ಕಸದ ಸಂಗ್ರಹಕ್ಕಾಗಿ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಎರಡು ವಾರಗಳಲ್ಲಿ ರೋಬೋಟ್ ಪ್ರಯೋಗ ಮಾದರಿ ತಯಾರಾಗಲಿದೆ. ಬಳಿಕ ಆಸ್ಪತ್ರೆ ಮತ್ತು ನ್ಯಾನೊ ಟೆಕ್ನಾಲಜಿ ಕೇಂದ್ರ ವೈದ್ಯರುಗಳಿಗೆ, ನರ್ಸ್, ಹೆಲ್ತ್ ಕೇರ್ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು. ಕೋವಿಡ್ 19 ಸೋಂಕಿಗೆ ಸಂಬಂಧಿಸಿದಂತೆ ಅಗತ್ಯವಾಗಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆಯೂ ತಿಳಿಸಿ ಕೊಡಲಾಗುವುದು ಎಂದು ವಿವರಿಸಿದ್ದಾರೆ.
Comments are closed.