ಅಂತರಾಷ್ಟ್ರೀಯ

ಕೋವಿಡ್ 19 ವೈರಸ್ ಗೆ ಹಾಲಿವುಡ್ ನಟ ಆ್ಯಂಡ್ರ್ಯೂ ಜಾಕ್ ಸಾವು

Pinterest LinkedIn Tumblr


ವಾಷಿಂಗ್ಟನ್ ಡಿಸಿ: ಮಾರಣಾಂತಿಕ ಕೋವಿಡ್ 19 ವೈರಸ್ ಗೆ “Star wars” ನಟ ಆ್ಯಂಡ್ರ್ಯೂ ಜಾಕ್ (76ವರ್ಷ) ಸಾವನ್ನಪ್ಪಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಹಾಲಿವುಡ್ ನಟ ಆ್ಯಂಡ್ರ್ಯೂ ಅವರು ಚೆರ್ಟ್ ಸೈ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ನಟನ ಆಪ್ತ ಕಾರ್ಯದರ್ಶಿ ಜಿಲ್ಲ್ ಮೆಕ್ ಕುಲ್ಲೋಗ್ ತಿಳಿಸಿದ್ದಾರೆ ಎಂದು ದ ಡೆಡ್ ಲೈನ್ ವರದಿ ಮಾಡಿದೆ.

ಆ್ಯಂಡ್ರ್ಯೂ ಜಾಕ್ ಅವರು ಥೇಮ್ಸ್ ನದಿಯಲ್ಲಿ ಅತೀ ಹಳೆಯ ಹೌಸ್ ಬೋಟ್ ನಲ್ಲಿ ವಾಸ್ತವ್ಯ ಹೂಡಿದ್ದು, ನಟ ತೀವ್ರವಾಗಿ ಏಕಾಂತದಲ್ಲಿ ವಾಸವಾಗಿದ್ದರು. ಜಾಕ್ ಪತ್ನಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದರು ಎಂದು ವರದಿ ಹೇಳಿದೆ.

ಜಾಕ್ ಪತ್ನಿ ಗಾಬ್ರಿಯೆಲ್ಲೆ ರೋಜರ್ಸ್ ಪತಿಯ ಸಾವಿನ ಬಗ್ಗೆ ಟ್ವೀಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ನಾವೊಬ್ಬ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಆ್ಯಂಡ್ರ್ಯೂ ಜಾಕ್ ಅವರು ಎರಡು ದಿನಗಳಿಂದ ಕೋವಿಡ್ 19 ವೈರಸ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಯಾವುದೇ ನೋವು ಅನುಭವಿಸದೆ. ಕುಟುಂಬದ ವರ್ಗದವರಿಗೆ ತೊಂದರೆಯಾಗದಂತೆ ಪ್ರೀತಿಯಿಂದಲೇ ನಿಧನ ಹೊಂದಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಜಾಕ್ ನಟರು ಮಾತ್ರವಲ್ಲ ಇವರೊಬ್ಬ ತತ್ವ ಮೀಮಾಂಸೆಯ ಶಿಕ್ಷಕರಾಗಿದ್ದರು. ಮೆನ್ ಇನ್ ಬ್ಲ್ಯಾಕ್ ಇಂಟರ್ ನ್ಯಾಷನಲ್, ದ ಲಾರ್ಡ್ ಆಫ್ ದ ರಿಂಗ್ಸ್ ಟ್ರೈಲೋಜಿ ಹಾಗೂ 3 ಮತ್ತು 4ನೇ ಅವೆಂಜರ್ಸ್ ಸಿನಿಮಾದಲ್ಲಿ ಜಾಕ್ ನಟಿಸಿದ್ದರು.

Comments are closed.