ಉಡುಪಿ: ಜಿಲ್ಲೆಯ ಅನೇಕ ರೈತರುಗಳು ಮಟ್ಟುಗುಳ್ಳ, ಕಲ್ಲಂಗಡಿ, ಅನಾನಸ್ಸು ಮುಂತಾದ ಹಣ್ಣು ಮತ್ತು ತರಕಾರಿಗಳನ್ನು ಬೆಳೆದಿದ್ದು, ಸದರಿ ಬೆಳೆಗಳನ್ನು ಮಾರುಕಟ್ಟೆಗೆ ಕಳುಹಿಸಲು ಸಾದ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದು, ಉಡುಪಿ ಜಿಲ್ಲೆಯ ರೈತರು ಬೆಳೆದ ಉತ್ಪನ್ನಗಳನ್ನು ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳ ಮಾರುಕಟ್ಟೆಗೆ ಸಾಗಾಟ ಮಾಡಲು ಅನುವಾಗುವಂತೆ 7 ವಾಹನಗಳಿಗೆ ಅನುಮತಿ ಪತ್ರವನ್ನು ಒದಗಿಸಿಕೊಡಲಾಗಿದೆ.
ಜಿಲ್ಲೆಯಲ್ಲಿ ಪ್ರಸಕ್ತ 25 ಹೆಕ್ಟೇರ್ ಪ್ರದೇಶದಲ್ಲಿ 1000 ಮೆ.ಟನ್ ಕಲ್ಲಂಗಡಿ ಮತ್ತು 150 ಹೆಕ್ಟೇರ್ ಪ್ರದೇಶದಲ್ಲಿ 9732 ಮೆ.ಟನ್ ಅನಾನಸ್ಸು, ಉತ್ಪಾದನೆಯಾಗುವ ಹಾಗೂ ಮಾರುಕಟ್ಟೆಯಾಗದೆ ಇರುವ ಅಂದಾಜಿದೆ.
ಪ್ರಸಕ್ತ ಜಿಲ್ಲೆಯ ರೈತರು ಬೆಳೆದ , 6 ಮೆ.ಟನ್ ಮಟ್ಟು ಗುಳ್ಳ ವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ,82 ಮೆ.ಟನ್ ಕಲ್ಲಂಗಡಿಯನ್ನು ಮಂಗಳೂರು, ಉತ್ತರಕನ್ನಡ, ದಾರವಾಡ ಜಿಲ್ಲೆಗೆ, 13 ಮೆ.ಟನ್ ಅನಾನಸ್ ನ್ನು ಶಿವಮೊಗ್ಗ, ಬೆಳ್ತಂಗಡಿ (ದ.ಕ.) ಜಿಲ್ಲೆಗೆ, 20 ಮೆ.ಟನ್ ಬಾಳೆ ಯನ್ನು ಉತ್ತರ ಕನ್ನಡ, ಬೆಳ್ತಂಗಡಿ (ದ.ಕ.) ಜಿಲ್ಲೆಗೆ ಹಾಗೂ 10 ಮೆ.ಟನ್ ಪಪ್ಪಾಯವನ್ನು ಉತ್ತರ ಕನ್ನಡ ಜಿಲ್ಲೆಗೆ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.
ಅಲ್ಲದೇ ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಹಣ್ಣುಗಳ ಸಗಟು ವ್ಯಾಪಾರಸ್ತರ ಸಭೆ ಕರೆದು ಜಿಲ್ಲೆಯ ವಿವಿದ ರೈತರಿಂದ , 35.00 ಮೆ. ಟನ್ ಅನಾನಸ್ಸು, 5,000 ಗೊನೆ ಬಾಳೆ, 55 ಮೆ. ಟನ್ ಕಲ್ಲಂಗಡಿಯನ್ನು ಮುಂದಿನ ಎರಡು ದಿನಗಳಲ್ಲಿ ರೈತರಿಂದ ಖರೀದಿಸಿ, ಮಾರಾಟ ಮಾಡಲು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿರುತ್ತಾರೆ.
Comments are closed.