ಸ್ಪೇನ್: ಜಗತ್ತಿನ ಮತ್ತೂಂದು ಆರ್ಥಿಕ ಸಂಕಷ್ಟಕ್ಕೆ ಕೋವಿಡ್ 19 ವೈರಸ್ ಕಾರಣವಾಗಿದೆ.
ಯುರೋಪಿನ ಎರಡನೇ ಅತಿ ಹೆಚ್ಚು ಕೋವಿಡ್ 19 ಪ್ರಕರಣ ದಾಖಲಾದ ಸ್ಪೇನ್ ಸೋಂಕಿನ ವಿರುದ್ಧ ಹೋರಾಡಲು ಕಟ್ಟುನಿಟ್ಟಿನ ಕ್ರಮಗಳನ್ನು ಹೇರಿದೆ. ಇದರಿಂದ ಸುಮಾರು 9 ಲಕ್ಷ ಉದ್ಯೋಗ ನಷ್ಟವಾಗಿದೆ.
ಮಾರ್ಚ್ ನ ವರದಿಯಂತೆ ದೇಶದಲ್ಲಿ ನಿರುದ್ಯೋಗ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಯುರೋಪ್ ವಲಯದಲ್ಲಿ ಹೆಚ್ಚು ನಿರುದ್ಯೋಗ ಹೊಂದಿದ ರಾಷ್ಟ್ರ ಸ್ಪೇನ್ ಎಂಬಂತಾಗಿದೆ.
ಮಾರ್ಚ್ ನಲ್ಲಿ ಕೋವಿಡ್ 19 ದೇಶ ಪೂರ್ತಿ ಹಬ್ಬಿದ ಪರಿಣಾಮ ಎಲ್ಲಾ ಉದ್ಯೋಗ ವಲಯಗಳನ್ನು ಮುಚ್ಚಿತ್ತು. ಇದೇ ಉದ್ಯೋಗ ನಷ್ಟವಾಗಲು ಪ್ರಮುಖ ಕಾರಣವಾಗಿದೆ.
ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಸುಮಾರು 5.50 ಲಕ್ಷ ಅಸಂಘಟಿತ ನೌಕರರು ಸೇರಿದಂತೆ 8,98,822 ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸ್ಪೇನ್‌ನ ಅಧಿಕೃತ ನಿರುದ್ಯೋಗ ಅಂಕಿ-ಅಂಶವು 3.5 ದಶಲಕ್ಷಕ್ಕೆ ಏರಿದೆ. ಇದು ಏಪ್ರಿಲ್ 2017 ರ ಅನಂತರದ ಗರಿಷ್ಠ ಮಟ್ಟ. ಮುಖ್ಯವಾಗಿ ಪ್ರವಾಸೋದ್ಯಮ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗ ನಷ್ಟ ಸಂಭವಿಸಿದೆ.
ವೈರಸ್ ವಿರುದ್ಧ ಹೋರಾಡಲು ವಿಧಿಸಲಾದ ಕ್ರಮಗಳ ಆರ್ಥಿಕ ಪರಿಣಾಮದ ಬಗ್ಗೆ ಹಲವು ಸಂಸ್ಥೆಗಳು ವರದಿಯನ್ನು ನೀಡಿವೆ. ವಿಶ್ವದಾದ್ಯಂತ 25 ದಶಲಕ್ಷ ಉದ್ಯೋಗಗಳು ನಷ್ಟವಾಗಬಹುದು ಎಂದು ಯುಎನ್ ವರದಿ ಅಂದಾಜಿಸಿದೆ.
ಈ ಮಧ್ಯೆ ಸ್ಪೇನ್‌ನಲ್ಲಿ 10,003 ಜನರು ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ. ದೃಢಪಡಿಸಿದ ಪ್ರಕರಣಗಳ ಸಂಖ್ಯೆ ಬುಧವಾರ 102,136 ರಿಂದ 110,238ಕ್ಕೆ ಏರಿದೆ. ವಿಶ್ವದ ಅತಿ ಹೆಚ್ಚು ಸಾವಿನ ಸಂಖ್ಯೆ 13,155 ಮತ್ತು 110,000ಕ್ಕೂ ಹೆಚ್ಚು ಪ್ರಕರಣಗಳು ಇಟಲಿಯಲ್ಲಿ ದಾಖಲಾಗಿವೆ.
ಆರ್ಥಿಕ ಮಹಾ ಕುಸಿತ
ಗುರುವಾರ, ಇಟಲಿಯ ಪ್ರಮುಖ ವ್ಯಾಪಾರ ಸಂಘವು ವರ್ಷದ ಎರಡನೇ ತ್ರೆ„ಮಾಸಿಕದಲ್ಲಿ ಕೈಗಾರಿಕಾ ಉತ್ಪಾದನೆಯು ಶೇ. 15ರ ವರೆಗೆ ಇಳಿಯಬಹುದು ಎಂದು ಹೇಳಿದೆ.
ಜರ್ಮನಿಯ ಆರ್ಥಿಕ ಸಚಿವ ಪೀಟರ್‌ಆಲ್ಟ್ ಮೇಯರ್ ದೇಶದ ಒಟ್ಟು ದೇಶೀಯ ಉತ್ಪನ್ನದ ನಷ್ಟವನ್ನು ಅಂದಾಜಿಸಿದ್ದಾರೆ. 2009 ರ ಆರ್ಥಿಕ ಬಿಕ್ಕಟ್ಟಿನ ಅವಧಿಗಿಂತ ಈ ವರ್ಷ ದೊಡ್ಡ ಕುಸಿತವನ್ನು ಕಾಣಬಹುದು ಎಂದಿದ್ದಾರೆ.
Comments are closed.