ಮಂಗಳೂರು,ಎಪ್ರಿಲ್ 04: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕೋವಿಡ್ 19 ಸೊಂಕಿತ ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು , ಇಲ್ಲಿಯ ತನಕ ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ಏರಿದೆ.
ಕಳೆದೆರಡು ದಿನಗಳಿಂದ ಪಾಸಿಟಿವ್ ಪ್ರಕರಣಗಳಿಲ್ಲದೆ ನಿರಾಳವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಶನಿವಾರ ಬೆಚ್ಚಿಬಿದ್ದಿದೆ. ಶನಿವಾರ ಒಂದೇ ದಿನ ಕೋವಿಡ್ 19 ಸೊಂಕಿತ ಮೂರು ಹೊಸದಾಗಿ ಪ್ರಕರಣಗಳು ಪತ್ತೆಯಾಗಿದ್ದು , ಹೀಗಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12 ಏರಿದೆ.
ಮೂರು ಹೊಸ ಪ್ರಕರಣಗಳಲ್ಲಿ ಒಬ್ಬರು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆ ಹಾಗೂ ಇನ್ನಿಬ್ಬರು ದೆಹಲಿಯಲ್ಲಿ ತಬ್ಲಿಫ್ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಯುವಕನೊಬ್ಬನಿಗೆ ಕೋವಿಡ್ – 19 (ಕೊರೋನ) ಸೋಂಕು ಇರುವುದು ದೃಢಪಟ್ಟಿದೆ ಎಂದು ಪೊಲೀಸರು ಧ್ವನಿವರ್ಧಕದ ಮೂಲಕ ಘೋಷಿಸಿದ್ದಾರೆ. ದೆಹಲಿಗೆ ತೆರಳಿದ್ದ ಈ ಯುವಕ ತುಂಬೆಯ ಮದಕ ಬೊಳ್ಳಾಡಿ ಪ್ರದೇಶದ ನಿವಾಸಿಯಾಗಿದ್ದು , ಈ ಗ್ರಾಮದಲ್ಲಿ 500ಕ್ಕೂ ಮನೆಗಳಿವೆ. ತಹಶೀಲ್ದಾರ್ ಮತ್ತು ಎಸ್ ಐ ಸ್ಥಳಕ್ಕೆ ಆಗಮಿಸಿದ್ದು ತುಂಬೆ ಗ್ರಾಮವನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.
ದಿಲ್ಲಿಗೆ ತೆರಳಿದ್ದ ಯುವಕ ಇತ್ತೀಚೆಗಷ್ಟೇ ರೈಲಿನಲ್ಲಿ ಊರಿಗೆ ಮರಳಿದ್ದ. ಈ ಹಿನ್ನೆಲೆಯಲ್ಲಿ ಯುವಕನನ್ನು ಪ್ರತ್ಯೇಕಿಸಿ ಆತನ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಅದರ ವರದಿ ಬಂದಿದ್ದು ವರದಿ ಪಾಸಿಟಿವ್ ಎಂದು ಹೇಳಲಾಗಿದೆ. ಶಿಷ್ಟಾಚಾರದ ಪ್ರಕಾರ ತುಂಬೆ ಗ್ರಾಮದ ಜನರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಪೊಲೀಸರು ಧ್ವನಿವರ್ಧಕದ ಮೂಲಕ ಯಾರೂ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.
ದೆಹಲಿಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಇನ್ನು ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಫ್-ಎ-ಜಮಾತ್ ಧಾರ್ಮಿಕ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸದ್ಯದ ಪ್ರಕಾರ 29 ಮಂದಿ ಭಾಗವಹಿಸಿರುವ ಬಗ್ಗೆ ಮಾಹಿತಿ ಇದ್ದು 9 ಜನರ ವರದಿ ಬಂದಿದ್ದು 2 ಪಾಸಿಟಿವ್ ಆಗಿದೆ. ಉಳಿದ 20 ಜನರ ವರದಿಗಾಗಿ ಜಿಲ್ಲಾಡಳಿತ ನೀರಿಕ್ಷೆಯಲ್ಲಿದೆ.
ಇದಲ್ಲದೆ ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದು ಕ್ವಾರೇಂಟೇನ್ ನಲ್ಲಿದ್ದ ವ್ಯಕ್ತಿಗೂ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಕಿಂತರ ಸಂಖ್ಯೆ 12 ಏರಿಕೆಯಾಗಿದೆ.
ಸಮಾವೇಶದಲ್ಲಿ ಭಾಗವಹಿಸಿದವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ಸೂಚನೆ:
ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗವಹಿಸಿದ 29 ಜನರಲ್ಲಿ 9 ಜನರ ವರದಿ ಬಂದಿದ್ದು 2 ಪಾಸಿಟಿವ್ ಮತ್ತು ಉಳಿದ 20 ಜನರ ವರದಿ ಬರಬೇಕಿದೆ.. ಅವರ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ತಬ್ಲೀಫ್ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದವರು ಇನ್ನು ಯಾರಾದರೂ ಇದ್ದಲ್ಲಿ ತಕ್ಷಣ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಭೇಟಿ ಮಾಡಬೇಕು ಎಂ,ದು ಸೂಚಿಸಲಾಗಿದೆ.
ಸಾಮಾಜಿಕ ಅಂತರವನ್ನು ಮನೆಯ ಒಳಗೆ ಕೂಡ ಪಾಲಿಸಬೇಕಾಗಿದ್ದು, ಆಶಾ ಕಾರ್ಯಕರ್ತೆಯರು ಮನೆ ಭೇಟಿಗೆ ಕೆಲವು ಪ್ರದೇಶಗಳಿಗೆ ಹೋದಾಗ ಒಂದೇ ಮನೆಯಲ್ಲಿ 40 – 50 ಜನರು ಗುಂಪಾಗಿ ಇರುವುದು ಕಂಡುಬಂದಿದ್ದು, ಯಾವುದೇ ಕಾರಣಕ್ಕೂ ಹಾಗೆ ಸೇರುವುದು ತಪ್ಪಾಗಿರುತ್ತದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
Comments are closed.