ಶರ್ಮಿಳಾ ಮಾಂಡ್ರೆ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೇಳಿಬಂದಿದೆ. ಅವರು ಚಲಿಸುತ್ತಿದ್ದ ಕಾರು ಶುಕ್ರವಾರ (ಏ.3) ರಾತ್ರಿ ಅಪಘಾತಕ್ಕೆ ಒಳಗಾಗಿದೆ. ಬೆಂಗಳೂರಿನ ವಸಂತ ನಗರದಲ್ಲಿ ಈ ಘಟನೆ ನಡೆದಿದ್ದು, ಐಷಾರಾಮಿ ಜಾಗ್ವಾರ್ ಕಾರು ಜಖಂ ಆಗಿದೆ. ಅಪಘಾತದಲ್ಲಿ ಶರ್ಮಿಳಾ ಅವರ ಮುಖ ಮತ್ತು ಕೈಗೆ ಗಾಯಗಳಾಗಿವೆ ಎಂಬ ಮಾಹಿತಿ ಕೇಳಿಬಂದಿದೆ.
ಅಷ್ಟಕ್ಕೂ ಈ ಲಾಕ್‌ಡೌನ್ ಸಮಯದಲ್ಲಿ ಶರ್ಮಿಳಾ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದರು ಎಂಬ ಪ್ರಶ್ನೆ ಉದ್ಭವ ಆಗಿದೆ. ಪೊಲೀಸ್ ಪಾಸ್ ಇಲ್ಲದೆ ಹೀಗೆ ಕಾರು ಚಲಾಯಿಸಿರುವುರಿಂದ ಲಾಕ್‌ಡೌನ್ ಆದೇಶ ಉಲ್ಲಂಘನೆ ಆದಂತಾಗಿದೆ. ಜಖಂ ಆಗಿರುವ ರೀತಿ ಗಮನಿಸಿದರೆ ಕಾರು ಅತಿ ವೇಗದಲ್ಲಿತ್ತು ಎಂಬುದು ಮೇಲ್ನೋಟಕ್ಕೇ ತಿಳಿಯುವಂತಿದೆ.
ಘಟನೆ ಬಳಿಕ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಶರ್ಮಿಳಾ ಚಿಕಿತ್ಸೆ ಪಡೆದಿದ್ದಾರೆ. ಅವರ ಜೊತೆ ಸ್ನೇಹಿತ ಲೋಕೇಶ್ ಎಂಬುವವರೂ ಇದ್ದರು ಎನ್ನಲಾಗಿದೆ. ಘಟನೆ ಸಂಬಂಧ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.