ರಾಷ್ಟ್ರೀಯ

ವಿಶ್ವದಲ್ಲಿ ಕೊರೋನಾಗೆ 62,433 ಮಂದಿ ಸಾವು, ಸೋಂಕಿತರ ಸಂಖ್ಯೆ 11 ಲಕ್ಷಕ್ಕೆ ಏರಿಕೆ

Pinterest LinkedIn Tumblr


ನವದೆಹಲಿ(ಏ.04): ವಿಶ್ವದಾದ್ಯಂತ ಕೊರೋನಾ ವೈರಸ್ ಅಟ್ಟಹಾಸಕ್ಕೆ ಇಲ್ಲಿಯವರೆಗೂ 62,433 ಮಂದಿ ಬಲಿಯಾಗಿದ್ದಾರೆ. ಜಗತ್ತಿನ ಒಟ್ಟು 182 ದೇಶಗಳಲ್ಲಿ 1,161,550 ಹೆಚ್ಚು ಮಂದಿಗೆ ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಭಾರತದಂತೆಯೇ ಇಡೀ ವಿಶ್ವದ ಬಹುತೇಕ ದೇಶಗಳಲ್ಲಿ ಸಂಪೂರ್ಣ ಲಾಕ್​​ಡೌನ್ ಘೋಷಣೆ ಮಾಡಲಾಗಿದೆ. ಹಾಗಾಗಿ ಸುಮಾರು 260 ಕೋಟಿ ಜನ ಈಗ ಗೃಹ ಬಂಧನಕ್ಕೆ ಒಳಗಾಗಿದ್ದಾರೆ. ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ 42 ದೇಶಗಳು ಲಾಕ್​​ಡೌನ್ ಮಾಡಲಾಗಿದೆ. ಇದೀಗ ಈ ಸಾಲಿಗೆ ಭಾರತ ಮತ್ತು ನ್ಯೂಜಿಲೆಡ್ ಸೇರ್ಪಡೆಯಾಗಿವೆ. ಎಲ್ಲೆಡೆಯೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಭಾರತದಲ್ಲಿ ಕೊರೋನಾ ವೈರಸ್​ ಅಟ್ಟಹಾಸ ಮುಂದುವರೆದಿದೆ. ಇಂದು ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಇಬ್ಬರು ವ್ಯಕ್ತಿಗಳು ಕೊರೋನಾಗೆ ಬಲಿಯಾದ ಪರಿಣಾಮ ಸಾವಿನ ಸಂಖ್ಯೆ 75ಕ್ಕೇರಿದೆ. ಇದುವರೆಗೂ 3,072 ಕೊರೋನಾ ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 212 ಮಂದಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಈ ಮಧ್ಯೆಯೇ ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್‌ ಅನ್ನು ನಿಯಂತ್ರಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಕೊಳ್ಳಲಾಗಿದೆ.

Comments are closed.