ನವದೆಹಲಿ: ಜನವರಿ ತಿಂಗಳಲ್ಲಿ ಮೊದಲ ಕೋವಿಡ್ 19 ವೈರಸ್ 19 ಪ್ರಕರಣ ಭಾರತದಲ್ಲಿ ಪತ್ತೆಯಾಗಿತ್ತು. ಈವರೆಗೆ ದೇಶದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 5,734ಕ್ಕೆ ಏರಿದೆ. 166 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಅಧಿಕವಾಗಿದೆ. ಮತ್ತೊಂದೆಡೆ ದೇಶದ ಮೂರು ರಾಜ್ಯಗಳಲ್ಲಿ ಮಾತ್ರ ಈವರೆಗೂ ಕೋವಿಡ್ 19 ವೈರಸ್ ನ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ದೇಶದ ಸಿಕ್ಕಿಂ, ಮೇಘಾಲಯದಲ್ಲಿ ಈವರೆಗೂ ಒಂದೇ ಒಂದು ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ, ಅಲ್ಲದೇ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿಯೂ ಮಾರಣಾಂತಿಕ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ ಎಂದು ವರದಿ ವಿವರಿಸಿದೆ.
ಮಿಜೋರಾಂ, ಅರುಣಾಚಲ ಪ್ರದೇಶದಲ್ಲಿಯೂ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಕೇವಲ ಶೇ.2ರಷ್ಟಿದೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಕೋವಿಡ್ 19 ಸೋಂಕು ಪರೀಕ್ಷೆಯ ಲ್ಯಾಬೋರೇಟರಿ ಕೊರತೆ ಇದ್ದಿರುವುದಾಗಿ ಮತ್ತೊಂದು ವರದಿ ತಿಳಿಸಿದೆ.
ಕೇಂದ್ರಾಡಳಿತ ಪ್ರದೇಶವಾದ ದಾದ್ರ ಮತ್ತು ನಗರ್ ಹವೇಲಿ, ದಾಮನ್ ಮತ್ತು ದಿಯೂ ಹಾಗೂ ಅದೇ ರೀತಿ ಲಕ್ಷದ್ವೀಪ ಪ್ರದೇಶಗಳಿಗೆ ಈವರೆಗೆ ಕೋವಿಡ್ 19 ಸೋಂಕು ಪತ್ತೆಯಾದ ಬಗ್ಗೆ ವರದಿಯಾಗಿಲ್ಲ.
ಉತ್ತರಪ್ರದೇಶ, ತೆಲಂಗಾಣ, ರಾಜಸ್ಥಾನ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
Comments are closed.