ಕರಾವಳಿ

ಲಾಕ್ ಡೌನ್ ನಡುವೆಯೇ ಸ್ಕೂಟರಿನಲ್ಲಿ ದನದ ಮಾಂಸ ಸಾಗಾಟ: ಕಾಪುವಿನಲ್ಲಿ ಇಬ್ಬರು ಅರೆಸ್ಟ್

Pinterest LinkedIn Tumblr

ಉಡುಪಿ: ಕೋವಿದ್-19 (ಕರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಲಾಕ್ ಡೌನ್ ಆದೇಶವಿದ್ದು ಈ ಸಮಯದಲ್ಲೂ ಕೂಡ ಸ್ಕೂಟರಿನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಉಡುಪಿ ಜಿಲ್ಲೆಯ ಕಾಪು ಪೊಲೀಸರು ಬಂಧಿಸಿದ್ದಾರೆ.

ಮಂಗಳುರು ಸುರತ್ಕಲ್ ಕೃಷ್ಣಪುರ ನಿವಾಸಿಗಳಾದ ಮೊಹಮ್ಮದ್ ಸಫ್ವಾನ್ (23), ಹಾಗೂ ಸಹಸವಾರ ಆಸ್ಗರ್ ಆಲಿ(39) ಬಂಧಿತರು.

ಸ್ಕೂಟರ್ ನಲ್ಲಿ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಮೂಳೂರು ಗ್ರಾಮದ ಗೋಲ್ಡನ್ ಜನರಲ್ ಸ್ಟೋರ್ ಸಮೀಪ ಮಂಗಳೂರು ಉಡುಪಿ ರಾ.ಹೆ 66 ರಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವಾಗ ಇಬ್ಬರು ಸ್ಕೂಟರಿನಲ್ಲಿ ಬಂದಿದ್ದು ಅವರುಗಳನ್ನು ನಿಲ್ಲಿಸಿ ಪರಿಶೀಲಿಸಿದಾಗ ಸ್ಕೂಟರ್ ನ ಸೀಟಿನ ಕೆಳಭಾಗದಲ್ಲಿ 7 ಪ್ಲಾಸ್ಟಿಕ್ ಕವರನಲ್ಲಿ ದನದ ಮಾಂಸ ಕಂಡುಬಂದಿದೆ. ದನದ ಮಾಂಸ ಸಾಗಾಟಕ್ಕೆ ಬಳಸಿದ ಸ್ಕೂಟರ್ ಒಂದೊಂದು ಕೆಜಿಯ 07 ಪ್ಲಾಸ್ಟಿಕ್ ಕವರ್ ಗಳಲ್ಲಿದ್ದ 07 ಕೆ.ಜಿ. ದನದ ಮಾಂಸವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕೋವಿದ್-19 (ಕರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಲಾಕ್ ಡೌನ್ ಆದೇಶ ಇದ್ದು ಯಾವುದೇ ಸಕಾರಣವಿಲ್ಲದೇ ಸಂಚರಿಸದಂತೆ ಸರಕಾರದ ಆದೇಶ ಇದ್ದರೂ ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಾಧ್ಯತೆ ಇದೆ ಎನ್ನುವ ವಿಷಯ ತಿಳಿದು ಸ್ಕೂಟರ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವ ಬಗ್ಗೆಯೂ ಪ್ರಕರನ ದಾಖಲು ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆ ಐಪಿಸಿ ಕಲಂ 269, ಕಲಂ 11 ಕರ್ನಾಟಕ ಗೋಹತ್ಯಾ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964 ಮತ್ತು ಸೆಕ್ಷನ್‌ 66 ಜೊತೆಗೆ 192(ಎ) ಐ.ಎಮ್.ವಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

 

Comments are closed.