ಆರೋಗ್ಯ

ಗರ್ಭಾವಸ್ಥೆಯಲ್ಲಿರುವಾಗ ಮಹಿಳೆಗೆ ಕಾಡುವ ಸಾಮಾನ್ಯ ಕಾಯಿಲೆಗಳು ಹಾಗೂ ನಿವಾರಣಾ ಸಲಹೆಗಳು.

Pinterest LinkedIn Tumblr

ಸ್ತ್ರೀ ಗರ್ಭಾವಸ್ಥೆ ಸಮಯದಲ್ಲಿ ಹೆಚ್ಚುವರಿ ಕಾಳಜಿಯನ್ನು ತನ್ನ ದೇಹದ ಆರೈಕೆಯಲ್ಲಿ ಮಾಡಬೇಕಾಗುತ್ತದೆ. ತಾಯಿ ಅನುಭವಿಸುವ ರೋಗಗಳನ್ನು ಮಗುವೂ ಎದುರಿಸಬೇಕಾದ ಸಮಸ್ಯೆ ಇರುವುದರಿಂದ ಆಕೆ ಬಹಳ ನಾಜೂಕಿನಿಂದಲೇ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ತಾಯಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದ ಕೂಡಲೇ ಆಕೆ ಸಾಮಾನ್ಯವಾಗಿರುವ ಕಾಯಿಲೆಗಳಿಗೆ ಒಳಗಾಗುತ್ತಾಳೆ. ಅದರಲ್ಲಿ ಹೆಚ್ಚು ಸಾಮಾನ್ಯವಾಗಿರುವಂತಹದ್ದು ಶೀತ, ಕೆಮ್ಮು ನೆಗಡಿಯಾಗಿದೆ.

ಗರ್ಭಾವಸ್ಥೆಯಲ್ಲಿ ಇದು ಸಾಮಾನ್ಯವಾಗಿದ್ದರೂ ತಾಯಿ ಕೆಲವೊಂದು ಆರೋಗ್ಯ ಸಲಹೆಗಳನ್ನು ಪಾಲಿಸುವುದರ ಮೂಲಕ ಇದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದಾಗಿದೆ. ದುಬಾರಿ ಔಷಧಗಳನ್ನು ತೆಗೆದುಕೊಳ್ಳುವ ಬದಲಿಗೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಸಲಹೆ ಸೂಚನೆಗಳು ನಿಮ್ಮ ರೋಗಗಳನ್ನು ನಿವಾರಿಸಲಿದೆ…

ಸಾಕಷ್ಟು ನೀರು ಕುಡಿಯುವುದರಿಂದ, ಹೆಚ್ಚಿನ ಸಮಸ್ಯೆಗಳಿಂದ ದೂರವಿರಬಹುದು. ಅದರಲ್ಲೂ ಗರ್ಭಾವಸ್ಥೆಯಲ್ಲಿ ಶೀತದಿಂದ ನೀವು ಬಳಲುತ್ತಿದ್ದೀರಿ ಎಂದಾದಲ್ಲಿ ಕನಿಷ್ಟ ಪಕ್ಷ 10 ಲೋಟಗಳಷ್ಟು ಉಗುರು ಬೆಚ್ಚನೆಯ ಬಿಸಿ ನೀರು ಕುಡಿಯಲೇಬೇಕು. ಗರ್ಭಾವಸ್ಥೆಯಲ್ಲಿ ಇಷ್ಟು ನೀರು ಕುಡಿಯಲೇಬೇಕಾಗಿರುವುದರಿಂದ ಇದರ ಪ್ರಮಾಣ 12 ಲೋಟವಾದರೂ ಚಿಂತೆ ಮಾಡಬೇಕಾಗಿಲ್ಲ.

ಕಟ್ಟಿದ ಮೂಗು ನಿಮಗೆ ಕಿರಿಕಿರಿಯನ್ನುಂಟು ಮಾಡುವುದು ಸಹಜವಾಗಿದೆ. ಇದಕ್ಕಾಗಿ ಸ್ಟೀಮ್ ತೆಗೆದುಕೊಳ್ಳುವುದು ಉತ್ತಮವಾಗಿದೆ. ವೇಪರ್ ರಬ್ ಅನ್ನು ಬಳಸಿಕೊಳ್ಳಬಹುದಾಗಿದೆ ಅಂತೆಯೇ ಗರ್ಭಾವಸ್ಥೆಯಲ್ಲಿ ಇದು ಸೂಕ್ತ ಎಂದೆನಿಸಿದೆ.

ಶೀತ ಉಂಟಾದಲ್ಲಿ ಗಂಟಲಲ್ಲಿ ಕಿರಿಕಿರಿ ಸರ್ವೇ ಸಾಮಾನ್ಯ. ಒಮ್ಮೊಮ್ಮೆ ನೋವು ಕಾಣಿಸಿಕೊಂಡು ಪಡಬಾರದ ಬಾಧೆ ಪಡಬೇಕಾಗುತ್ತದೆ. ಇದಕ್ಕಾಗಿ ನೈಸರ್ಗಿಕ ವಿಧಾನವಾಗಿರುವ ಉಪ್ಪು ನೀರನ್ನು ಬಳಸಿಕೊಂಡು ಮುಕ್ಕಳಿಸುವುದನ್ನು ಮರೆಯದಿರಿ. ಈ ಮಿಶ್ರಣಕ್ಕೆ ಜೇನು, ಶುಂಠಿ, ಲಿಂಬೆ ರಸವನ್ನು ಸೇರಿಸಬಹುದಾಗಿದೆ.

ಮಗು ಮತ್ತು ತಾಯಿಯ ಉತ್ತಮ ಆರೋಗ್ಯಕ್ಕಾಗಿ ನ್ಯೂಟ್ರಿಶಿಯಸ್ ಆಹಾರಗಳನ್ನು ತೆಗೆದುಕೊಳ್ಳಲೇಬೇಕು. ತಾಜಾ ಹಣ್ಣು ಮತ್ತು ತರಕಾರಿಗಳ ಆಯ್ಕೆಯನ್ನು ಮಾಡಿಕೊಂಡು ಆರೋಗ್ಯಕರವಾಗಿ ಆಹಾರವನ್ನು ಸೇವಿಸಿ. ಇವುಗಳಲ್ಲಿ ಉತ್ಕರ್ಷಣ ನಿರೋಧಿ ಅಂಶಗಳು ಹೇರಳವಾಗಿರುವುದರಿಂದ ಕೋಶಗಳನ್ನು ಆರೋಗ್ಯಯುತ ಮತ್ತು ಬಲಿಷ್ಟಗೊಳಿಸುತ್ತವೆ. ಇದರಿಂದ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿ ತಾಯಿಗೆ ಬರುತ್ತದೆ.

ಸಾಕಷ್ಟು ವಿಶ್ರಾಂತಿಯನ್ನು ಈ ಸಮಯದಲ್ಲಿ ನೀವು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ ನಿಮ್ಮಲ್ಲಿ ಉತ್ಪನ್ನವಾಗುತ್ತದೆ. ಇದರಿಂದ ನೀವು ತ್ವರಿತವಾಗಿ ಗುಣಮುಖರಾಗುವಿರಿ.

ನೀವು ಸಾಕಷ್ಟು ಸ್ವಚ್ಛತಾ ಸೂತ್ರಗಳನ್ನು ಪಾಲಿಸುತ್ತಿಲ್ಲ ಎಂದಾದಲ್ಲಿ ರೋಗಕ್ಕೆ ನೀವು ಬೇಗನೇ ತುತ್ತಾಗುವಿರಿ. ಸ್ವಚ್ಛತೆಗೆ ಆದ್ಯತೆ ನೀಡಿ ಇದರಿಂದ ವೈರಸ್ಗಳು ನಿಮ್ಮ ಮೇಲೆ ದಾಳಿ ಮಾಡುವುದು ಕಡಿಮೆಯಾಗಿರುತ್ತದೆ. ಆಹಾರವನ್ನು ಸೇವಿಸುವ ಮುನ್ನ ಕೈಗಳನ್ನು ನೀಟಾಗಿ ತೊಳೆದುಕೊಳ್ಳಿ ಮತ್ತು ಆಹಾರಗಳನ್ನು ಚೆನ್ನಾಗಿ ಬೇಯಿಸಿ ಸೇವಿಸಿ.

ಮಳೆಗಾಲ ಮತ್ತು ಚಳಿಗಾಲದಲ್ಲಿ ನಿಮ್ಮನ್ನು ನೀವು ಬೆಚ್ಚಗಿರಿಸಿಕೊಳ್ಳುವುದು ಅತಿ ಮುಖ್ಯವಾದುದು. ಶೀತದಲ್ಲಿ ಹೆಚ್ಚು ಅಡ್ಡಾಡದಂತೆ ಜಾಗ್ರತೆ ವಹಿಸಿ. ಕಾಲುಗಳನ್ನು ಸಾಕ್ಸ್ನಿಂದ ರಕ್ಷಿಸಿಕೊಳ್ಳಿ ಮತ್ತು ಬೆಚ್ಚಗಿನ ದಿರಿಸುಗಳನ್ನು ಧರಿಸಿಕೊಂಡು ದೇಹವನ್ನು ಬೆಚ್ಚಗಿರಿಸಿಕೊಳ್ಳಿ.

Comments are closed.