ಆರೋಗ್ಯ

ಲಕ್ವ ಅಥವಾ ಪಾರ್ಶ್ವವಾಯುವಿನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ ಆರೋಗ್ಯವಾಗಿರಿ.`

Pinterest LinkedIn Tumblr

ಪಾರ್ಶ್ವವಾಯು ಎಂಬುದು ತುರ್ತು ಚಿಕಿತ್ಸೆ ಅಗತ್ಯವಿರುವ ಒಂದು ಗಂಭೀರ ಖಾಯಿಲೆ. ಇದು ಯಾವ ಸಮಯದಲ್ಲಿ ಬೇಕಾದರೂ ಯಾರಿಗಾದರೂ ಸಂಭವಿಸಬಹುದು.ಮೆದುಳಿಗೆ ರಕ್ತ ಪೂರೈಸುವ ನರದಲ್ಲಿ ಉಂಟಾಗುವ ವ್ಯತ್ಯಾಸದಿಂದ ಪಾರ್ಶ್ವವಾಯು ಸಂಭವಿಸುತ್ತದೆ.

ಪಾರ್ಶ್ವವಾಯುವಿನಲ್ಲಿ ಎರಡು ವಿಧಗಳಿವೆ –
1.ರಕ್ತಕೊರತೆಯಿಂದ ಉಂಟಾಗುವ ಪಾರ್ಶ್ವವಾಯು: ಸಾಮಾನ್ಯವಾಗಿ ಮೆದುಳಿಗೆ ರಕ್ತ ಸರಬರಾಜು ಸರಿಯಾಗಿ ನಡೆಯದೇ ಇದ್ದ ಸಮಯದಲ್ಲಿ ಈ ಬಗೆಯ ಪಾರ್ಶ್ವವಾಯು ಸಂಭವಿಸುತ್ತದೆ.
2.ರಕ್ತಸ್ರಾವದಿಂದ ಉಂಟಾಗುವ ಪಾರ್ಶ್ವವಾಯು: ಮೆದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳವು ದುರ್ಭಲಗೊಂಡಾಗ ಅಥವಾ ರಕ್ತನಾಳವು ವಿಫಲಗೊಂಡಾಗ ಈ ಬಗೆಯ ಪಾರ್ಶ್ವವಾಯು ಉಂಟಾಗುತ್ತದೆ.

ಪಾರ್ಶ್ವವಾಯುವಿನ ಅಪಾಯಕಾರಿ ಅಂಶಗಳು:
ಇದು ಉಂಟಾಗುಲು ವಯಸ್ಸು, ಕೆಲಸದ ಒತ್ತಡ ಜೊತೆಯಲ್ಲಿಯೇ ಕುಟುಂಬದ ಇತಿಹಾಸ ಕೂಡಾ ಕಾರಣವಾಗುತ್ತದೆ. ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಆದರೆ ಆಧುನಿಕತೆಯ ಈ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ. ಮತ್ತು ಆರೋಗ್ಯಕರವಾದ ಆಹಾರವನ್ನು ಸೇವಿಸುವುದರಿಂದ ಪಾರ್ಶ್ವವಾಯುವಿನ ಅಪಾಯವನ್ನು ತಡೆಯಬಹುದು.

ಜೀವನ ಶೈಲಿಯ ಅಪಾಯಕಾರಿ ಅಂಶಗಳು:
ಅತಿಯಾದ ತೂಕ ಅಥವಾ ಬೊಜ್ಜು, ದೇಹದ ಜಡತ್ವ, ಆಹಾರ ಕ್ರಮಗಳು ಅಂದರೆ ಅತಿಯಾಗಿ ಆಹಾರ ಸೇವನೆ ಅಥವಾ ಸೇವಿಸದೇ ಇರುವುದು,ಮದ್ಯಪಾನ ಮಾಡುವುದು, ದೂಮಪಾನ ಮಾಡುವುದು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.

ವೈದ್ಯಕೀಯ ಅಂಶಗಳು:
ರಕ್ತದೊತ್ತಡ ಇರುವವರಿಗೆ,ಕೊಲೆಸ್ಟ್ರಾಲ್ ಇಂದ ಬಳಲುತ್ತಿರುವವರಿಗೆ,ಮಧುಮೇಹಿಗಳಿಗೆ, ನಿದ್ರಾಹೀನತೆ ಇರುವವರಿಗೆ,ಹಾಗೂ ಹೃದಯ ಸಂಭಂಧಿ ಖಾಯಲಿಲೆಯಿಂದ ಬಳಲುತ್ತಿರುವವರಿಗೆ ಇದರ ಅಪಾಯ ಹೆಚ್ಚು.
ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದರಿಂದ ಮತ್ತು ವೈದ್ಯಕೀಯ ಅಂಶಗಳ ನಿಯಂತ್ರಣಕ್ಕೆ ಸರಿಯಾದ ಔಷಧಿಗಳನ್ನು ಸೇವಿಸುವುದರಿಂದ ಪಾರ್ಶ್ವವಾಯುವಿನ ಅಪಾಯವನ್ನು ತಡೆಯಬಹುದು.

Comments are closed.