ನವದೆಹಲಿ: ಕೊರೋನಾ ಲಾಕ್ ಡೌನ್ ಮುಂದಿನ ಮಂಗಳವಾರ ಕೊನೆಯಾಗುತ್ತದೆಯೇ ಇಲ್ಲ ಮುಂದುವರಿಯುತ್ತದೆಯೇ ಎಂದು ತಿಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ದೇಶವಾಸಿಗಳನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ಅದಕ್ಕೂ ಮುನ್ನ ಅವರು ನಾಳೆ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿ ತೀರ್ಮಾನಕ್ಕೆ ಬರಲಿದ್ದಾರೆ.
ಸರ್ಕಾರದ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಲಾಕ್ ಡೌನ್ ಮುಂದುವರಿಯುವ ಸಾಧ್ಯತೆಯಿದ್ದು ಆದರೆ ಈ ಬಾರಿ ಹಲವು ಬದಲಾವಣೆಗಳಾಗುವ ನಿರೀಕ್ಷೆಯಿದೆ. ಅಂತರರಾಜ್ಯ ಚಲನವಲನಗಳಿಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ. ಅಗತ್ಯ ವಸ್ತುಗಳು ಜನರಿಗೆ ಎಂದಿನಂತೆ ಸಿಗಲಿದೆ. ಶಾಲಾ, ಕಾಲೇಜು, ಧಾರ್ಮಿಕ ಸಂಸ್ಥೆಗಳು ಮುಚ್ಚುವ ಸಾಧ್ಯತೆಯಿದೆ.
ಮೂರು ವಾರಗಳ ಲಾಕ್ ಡೌನ್ ನಿಂದ ಈಗಾಗಲೇ ಆರ್ಥಿಕವಾಗಿ ಸಾಕಷ್ಟು ನಷ್ಟವುಂಟಾಗಿರುವುದರಿಂದ ಕೆಲವು ವಲಯಗಳಿಗೆ ವಿನಾಯ್ತಿ ಘೋಷಿಸುವ ಸಾಧ್ಯತೆಯಿದೆ, ಅದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಬಂಧನೆ ಹೇರುವ ಮೂಲಕ.
Comments are closed.