ರಾಷ್ಟ್ರೀಯ

ಕೊರೋನಾ: ಸೋಂಕಿತರ ಸಂಖ್ಯೆ 6,412ಕ್ಕೆ, ಮೃತರ ಸಂಖ್ಯೆ 199ಕ್ಕೆ ಏರಿಕೆ

Pinterest LinkedIn Tumblr


ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 678 ಜನರಲ್ಲಿ ಕೊರೊನಾವೈರಸ್ (Coronavirus) ಸೋಂಕು ಕಾಣಿಸಿಕೊಂಡಿದೆ. ಇದರ ಪರಿಣಾಮ ಭಾರತದಲ್ಲಿ ಸೋಂಕಿತರ ಸಂಖ್ಯೆ 6,412ಕ್ಕೆ ಏರಿಕೆಯಾಗಿದೆ. ಜತೆಗೆ ಇದುವರೆಗೂ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 199ಕ್ಕೆ ಏರಿಕೆಯಾಗಿದೆ. ಈ ಪೈಕಿ 593 ಮಂದಿ ಚೇತರಿಸಿಕೊಂಡು ಡಿಸ್ಚಾರ್ಜ್​​ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 1,364 ಮಂದಿಗೆ ಕೊರೋನಾ ಸೋಕು ತಗುಲಿದೆ. ನಂತರದ ಸ್ಥಾನ ತಮಿಳುನಾಡು- 834, ದೆಹಲಿ- 720, ರಾಜಸ್ಥಾನ- 463, ತೆಲಂಗಾಣ- 442, ಉತ್ತರ ಪ್ರದೇಶ- 410, ಕೇರಳ- 357, ಆಂಧ್ರ ಪ್ರದೇಶ- 348, ಮಧ್ಯಪ್ರದೇಶ- 259, ಗುಜರಾತ್‌- 241, ಕರ್ನಾಟಕ- 181, ಹರಿಯಾಣ- 169,‌ ಜಮ್ಮು ಮತ್ತು ಕಾಶ್ಮೀರ- 158, ಪಶ್ಚಿಮ ಬಂಗಾಳ- 116, ಪಂಜಾಬ್‌- 101, ಒರಿಸ್ಸಾ- 44, ಬಿಹಾರ್‌- 39, ಉತ್ತರಾಖಂಡ- 35, ಅಸ್ಸಾಂ- 29, ಚಂಡೀಗಢ- 18, ಹಿಮಾಚಲ ಪ್ರದೇಶ 18, ಲಡಾಖ್‌- 15, ಜಾರ್ಖಂಡ್‌- 13, ಅಂಡಮಾನ್‌- ನಿಕೋಬಾರ್‌ ದ್ವೀಪ- 11, ಛತ್ತೀಸಗಡ- 10, ಗೋವಾ- 7, ಪುದುಚೆರಿ- 5, ಮಣಿಪುರ- 2, ತ್ರಿಪುರ-1, ಮಿಜೋರಾಮ್‌-1 ಮತ್ತು ಅರುಣಾಚಲ ಪ್ರದೇಶದಲ್ಲಿ 1 ಸೋಂಕು ಪ್ರಕರಣಗಳು ವರದಿಯಾಗಿವೆ.

ಲಾಕ್​ಡೌನ್​ ಘೋಷಿಸಿ 14 ದಿನಗಳಾದರೂ ಕೊರೋನಾ ಕೋವಿಡ್ -19 (Covid-19) ಸೋಂಕು ನಿಯಂತ್ರಣಕ್ಕೆ ಬಾರದೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಏತನ್ಮಧ್ಯೆ ಏಪ್ರಿಲ್ 14ರ ನಂತರವೂ ಲಾಕ್​​ಡೌನ್ (Lockdown) ಮುಂದುವರೆಸಬೇಕೇ ಬೇಡವೇ ಎಂಬ ವಿಚಾರವಾಗಿ ಪ್ರಧಾನಿ ಮೋದಿ ಮೊನ್ನೆ ಸರ್ವಪಕ್ಷಗಳ ಸಭೆ ನಡೆಸಿದರು. ಸದ್ಯದ ಪರಿಸ್ಥಿತಿಯಲ್ಲಿ ಲಾಕ್​ಡೌನ್​ ಮುಂದುವರೆಸುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿದರು.

Comments are closed.