ಕರಾವಳಿ

ಕೊರೋನ ಪ್ರಕರಣ : 12ರಲ್ಲಿ 8 ಮಂದಿ ಗುಣಮುಖ – 6ನೇ ಸ್ಥಾನಕ್ಕಿಳಿದ ದ.ಕ.ಜಿಲ್ಲೆ

Pinterest LinkedIn Tumblr

ಮಂಗಳೂರು, ಎಪ್ರಿಲ್.14 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಕೂಡ ಹೊಸ ಕೊರೋನ ಪ್ರಕರಣ ವರದಿಯಾಗಿಲ್ಲ. ಕೋರೋನಾ ಪ್ರಕರಣಗಳಲ್ಲಿ ಸೋಮವಾರ ದ. ಕ ಯಾವುದೇ ಪಾಸಿಟಿವ್ ಇಲ್ಲ.

ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ವೈದ್ಯಕೀಯ ತಂಡವು ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ಮುಂದುವರಿಸಿದ್ದು, ಇದುವರೆಗೆ ಯಾವೂದೇ ಕೊರೋನ ಪ್ರಕರಣ ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿದ್ದಾರೆ.

ಬೆಂಗಳೂರು, ‌ಮೈಸೂರು ನಂತರ 3 ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಇದೀಗ 6ನೇ ಸ್ಥಾನಕ್ಕಿಳಿದಿದೆ. ಜಿಲ್ಲೆಯ ಮಟ್ಟಿಗೆ ಇದು ಸಮಾಧಾನಕರ ಸಂಗತಿ. ಆದರೂ, ಇನ್ನೂ ಬಹಳಷ್ಟು ಜಾಗರೂಕರಾಗಿರಬೇಕಿದೆ.
ಜಿಲ್ಲೆಯಲ್ಲಿ 12 ಪ್ರಕರಣಗಳಲ್ಲಿ 8 ಮಂದಿ ಗುಣಮುಖರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹೊಸ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಮಾರ್ಚ್ 22ರ ಬಳಿಕ ಒಟ್ಟು 12 ಮಂದಿಯಲ್ಲಿ ಕೊರೋನ ದೃಢಪಟ್ಟಿತ್ತು. ಎಪ್ರಿಲ್ 4ರಂದು ಒಂದೇ ದಿನ ಜಿಲ್ಲೆಯಲ್ಲಿ ಮೂವರಿಗೆ ಪಾಸಿಟಿವ್ ಬಂದಿತ್ತು. ಆ ಬಳಿಕ ಈವರೆಗೆ ಪಾಸಿಟಿವ್ ದಾಖಲಾಗಿಲ್ಲ. ಇದು ದ.ಕ. ಜಿಲ್ಲೆಯ ಮಟ್ಟಿಗೆ ಸಮಾಧಾನಕರ ಸಂಗತಿಯಾಗಿದೆ.

Comments are closed.