ನವದೆಹಲಿ (ಏ. 17): ಜಗತ್ತನ್ನೇ ಕಂಗಾಲಾಗಿಸಿರುವ ಕೊರೋನಾ ವೈರಸ್ಗೆ ವಿಶ್ವದ 1,40,902 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ 21,82,197ಕ್ಕೆ ಏರಿಕೆಯಾಗಿದೆ. ಅಮೆರಿಕವೊಂದರಲ್ಲೇ 34,617 ಜನರು ಸಾವನ್ನಪ್ಪಿದ್ದು, 6,77,570 ಜನರಿಗೆ ಸೋಂಕು ತಗುಲಿದೆ.
ಅಮೆರಿಕದ ನಂತರದ ಸ್ಥಾನದಲ್ಲಿರುವ ಇಟಲಿಯಲ್ಲಿ 22,170 ಜನ ಸಾವನ್ನಪ್ಪಿದ್ದು, 1,68,941 ಜನರಿಗೆ ಸೋಂಕು ತಗುಲಿದೆ. ಸ್ಪೇನ್ನಲ್ಲಿ 1,84,948 ಜನರಿಗೆ ಸೋಂಕು ತಗುಲಿದ್ದು, ಈಗಾಗಲೇ 19,315 ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 13,430 ಜನರಿಗೆ ಸೋಂಕು ಪತ್ತೆಯಾಗಿದ್ದು, 448 ಜನರು ಸಾವನ್ನಪ್ಪಿದ್ದಾರೆ. ಫ್ರಾನ್ಸ್ನಲ್ಲಿ ಗುರುವಾರ ಒಂದೇ ದಿನ 753 ಜನರು ಕೊರೋನಾ ವೈರಸ್ನಿಂದ ಸಾವನ್ನಪ್ಪಿದ್ದಾರೆ. ಇಂಗ್ಲೆಂಡ್ನಲ್ಲಿ ಕೊರೋನಾ ಅಟ್ಟಹಾಸ ಹೆಚ್ಚುತ್ತಿರುವುದರಿಂದ ಮತ್ತೆ 3 ವಾರಗಳ ಕಾಲ ಲಾಕ್ಡೌನ್ ಮುಂದುವರಿಸಲಾಗಿದೆ.
ಅಮೆರಿಕದಲ್ಲಿ ಬುಧವಾರ ಒಂದೇ ದಿನ 2,400ಕ್ಕೂ ಹೆಚ್ಚು ಜನರು ಕೊರೋನಾ ವೈರಸ್ನಿಂದ ಸಾವನ್ನಪ್ಪಿದ್ದರು. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಅಧಿಕವಾಗಿದೆ. ಈ ಸಂಖ್ಯೆಗೆ ಹೋಲಿಸಿದರೆ ಇಂದು ಅಮೆರಿಕದಲ್ಲಿ ಪತ್ತೆಯಾಗಿರುವ ಸೋಂಕಿತರ ಪ್ರಮಾಣ ಕಡಿಮೆಯಿದೆ. ಫ್ರಾನ್ಸ್ನಲ್ಲಿ ಕೂಡ ಬುಧವಾರ 2,438 ಜನರು ಸಾವನ್ನಪ್ಪಿದ್ದರು. ಆದರೆ, ಗುರುವಾರ ಆ ಸಂಖ್ಯೆ ಇಳಿಮುಖವಾಗಿದೆ.
Comments are closed.