ಕರ್ನಾಟಕ

ಹುಬ್ಬಳ್ಳಿಯಲ್ಲಿ ಸ್ಮಶಾನ ಕಾಯುತ್ತಿದ್ದ 63 ವರ್ಷದ ವೃದ್ಧರೊಬ್ಬರಿಗೆ ಕೊರೊನಾ ಪಾಸಿಟಿವ್

Pinterest LinkedIn Tumblr

ಹುಬ್ಬಳ್ಳಿ: ರೋಗಿ-236ರ ದ್ವಿತೀಯ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಕರಾಡಿ ಓಣಿಯ 63 ವರ್ಷದ ವೃದ್ಧರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತ ವೃದ್ಧನನ್ನು ರೋಗಿ-363 ಎಂದು ಗುರುತಿಸಲಾಗಿದೆ. ಅವರಿಗೆ ಹುಬ್ಬಳ್ಳಿಯ ಕಿಮ್ಸ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ವೃದ್ಧ ಹುಬ್ಬಳ್ಳಿಯಲ್ಲಿ ಸ್ಮಶಾನ ಕಾಯುತ್ತಿದ್ದರು ಎಂದು ಗುರುತಿಸಲಾಗಿದೆ. ಅವರು ಮಾರ್ಚ್ 27ರಂದು ಕಾಳಮ್ಮ ಸರ್ಕಲ್‍ನಿಂದ ಡಾಕಪ್ಪ ಸರ್ಕಲ್‍ವರೆಗೆ ಆಹಾರ ಧಾನ್ಯ ಹಂಚಿಕೆಯ ತಂಡದಲ್ಲಿದ್ದರು ಎಂದು ತಿಳಿದುಬಂದಿದೆ.

ಧಾರವಾಡ ಜಿಲ್ಲೆಯ ಕೋವಿಡ್-19 ಪೀಡಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, ಈ ಪೈಕಿ ಓರ್ವ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 6 ಜನರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಗಿ-363ರ ಸಂಪರ್ಕದಲ್ಲಿರುವವರು ಹಾಗೂ ಆಹಾರ ಕಿಟ್ ಪಡೆದವರು ಕೂಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Comments are closed.