ಆರೋಗ್ಯ

ಗುದದ್ವಾರದ ತುರಿಕೆ ನಿವಾರಣೆಗೆ ಈ ಮನೆ ಮದ್ದು.

Pinterest LinkedIn Tumblr

ಗುದದ್ವಾರದ ತುರಿಕೆಯು ಹೇಳಿಕೊಳ್ಳಲಾಗದಂತಹ ಒಂದು ಸಮಸ್ಯೆ. ಜಗತ್ತಿನಲ್ಲಿ ಬಹುತೇಕ ಜನರು ತಮ್ಮ ಜೀವನದಲ್ಲಿ ಅನುಭವಿಸುವ ಹೇಳಿಕೊಳ್ಳಲಾಗದ ಒಂದು ಸಮಸ್ಯೆ ಎಂದರೆ ಅದು ಗುದದ್ವಾರದಲ್ಲಿ ತುರಿಕೆ ಆಗುವುದು. ಸಾಮಾನ್ಯವಾಗಿ, ಗುದದ್ವಾರದಲ್ಲಿ ನಿಮಗೆ ಕಡಿತ ಕಾಣಿಸಿಕೊಳ್ಳಬಹುದು ಮತ್ತು ನೀವು ಕೆರೆದುಕೊಂಡರೆ ಆ ತುರಿಕೆ ಮಾಯವಾಗಬಹುದು. ನಿಮಗೆ ಅಹಿತಕರವಾಗಿರುವುದು ಅಷ್ಟೇ ಅಲ್ಲದೆ, ಮುಜುಗರ ಕೂಡ ಉಂಟು ಮಾಡುತ್ತದೆ.

ಮೊದಲನೆಯದಾಗಿ, ಗುದದ್ವಾರದಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಅದರ ಚರ್ಮಕ್ಕೆ ಇರಿಸುಮುರಿಸು ಉಂಟಾದಾಗ. ಅದರಲ್ಲೂ ನಿಮಗೆ ಹೆಚ್ಚು ವಯಸಾಗಿದ್ದರೆ, ಡೈಹರೆಯಾ, ಹೆಮೊರೊಹಾಯಿಡ್, ಸೋರಿಕೆ ಮತ್ತು ಇತ್ಯಾದಿ ತೊಂದರೆಗಳು ಮತ್ತು ಅವುಗಳೊಂದಿಗೆ ನೀವು ನೈರ್ಮಲ್ಯವನ್ನ ಕಾಪಾಡಿಕೊಳ್ಳದೆ ಇದ್ದರೆ, ಹೀಗೆ ತುರಿಕೆ ಉಂಟಾಗುವ ಸಾಧ್ಯತೆಗಳು ಮತ್ತಷ್ಟು ಹೆಚ್ಚಾಗುತ್ತವೆ. ಈ ರೀತಿಯ ತುರಿಕೆಯನ್ನು ದೂರವಿಡಲು ಅಥವಾ ಈಗಾಗಲೇ ಉಂಟಾಗಿದ್ದರೆ, ಅದನ್ನು ಕಡಿಮೆ ಮಾಡಲು ಇಲ್ಲಿ ಕೆಲವೊಂದು ವಿಧಾನಗಳನ್ನ ನಾವು ತಿಳಿಸುತ್ತೇವೆ ಓದಿ.

ಗುದದ್ವಾರದ ತುರಿಕೆಯನ್ನ ದೂರವಿಡುವ ವಿಧಾನಗಳು
೧. ಒತ್ತಡವನ್ನ ಸಂಭಾಳಿಸಿ
ನಿಮಗೇ ತಿಳಿದಿರುವ ಹಾಗೆ ಒತ್ತಡ ಮತ್ತು ಆತಂಕ ನಿಮ್ಮ ಹಾರ್ಮೋನುಗಳ ಮೇಲೆ ಪ್ರಭಾವ ಬೀರುತ್ತವೆ. ಇದು ಯಾವುದಾದರು ಒಂದು ರೀತಿಯಲ್ಲಿ ನರತುದಿಗಳು ಮೇಲೆ ಪ್ರಭಾವ ಬೀರುತ್ತದೆ. ಒತ್ತಡ ಮತ್ತು ಗುದದ್ವಾರದ ತುರಿಕೆಯ ನಡುವೆ ಯಾವುದೇ ರೀತಿಯ ನೇರವಾದ ಸಂಬಂಧವಿರುವುದಕ್ಕೆ ಪುರಾವೆ ಇಲ್ಲದಿದ್ದರೂ, ಪರೋಕ್ಷವಾದ ಸಂಬಂಧ ಇರಬಹುದು.

೨. ಯೆಥೇಚ್ಛವಾಗಿ ನೀರು ಕುಡಿಯಿರಿ
ಇನ್ನೊಂದು ಪರಿಣಾಮಕಾರಿ ವಿಧಾನ ಎಂದರೆ ಅದು ಪ್ರತಿದಿನವೂ ತಪ್ಪದಂತೆ ಯೆಥೇಚ್ಛವಾಗಿ ನೀರು ಕುಡಿಯುವುದು. ನಿಮ್ಮ ಜಠರಗರುಳಿನ ನಾಳದಲ್ಲಿರುವ ಹಾನಿಕಾರಕ ಟಾಕ್ಸಿನ್ಸ್ ಮತ್ತು ಕ್ರಿಮಿಗಳನ್ನ ನಾಶ ಮಾಡಿ ಸ್ವಚ್ಛ ಮಾಡುತ್ತದೆ. ಹೀಗಾಗಿ ನೀವು 10-12 ಲೋಟಗಳಷ್ಟು ನೀರು ಕುಡಿಯಬೇಕು.

೩. ಓಡಾಡುತ್ತಿರಿ
ನೀವು ನಿಮ್ಮ ಗುದದ್ವಾರದ ಮೇಲೆ ನಿಯಮಿತವಾಗಿ ಒತ್ತಡ ಹೇರಿದರೆ, ಆ ಭಾಗದಲ್ಲಿ ತೇವಾಂಶ ಮತ್ತು ಬೆವರು ಕಟ್ಟಿಕೊಳ್ಳುತ್ತದೆ. ಅಲ್ಲದೆ, ನೀವು ಎಲ್ಲಿಗಾದರೂ ಪ್ರಯಾಣ ಮಾಡುವಾಗ ಅಥವಾ ಒಂದೇ ಜಾಗದಲ್ಲಿ ಕೂತು ಪ್ರಯಾಣಿಸುವಾಗ ನಿಮ್ಮ ಗುದದ್ವಾರಕ್ಕೆ ಬಟ್ಟೆಯು ಅಂಟಿಕೊಳ್ಳುತ್ತದೆ ಮತ್ತು ಇರಿಸುಮುರಿಸು ಉಂಟು ಮಾಡುತ್ತದೆ. ಹೀಗಾಗಿ ನೀವು ಹೆಚ್ಚು ಒಂದೇ ಕಡೆ ಕೂರದೆ, ಓಡಾಡುತ್ತಿರಿ.

೪. ಸುಗಂಧಭರಿತ ಸೋಪ್ ಅನ್ನು ಬಳಸಬೇಡಿ
ನೀವು ಗುದದ್ವಾರದ ತುರಿಕೆಯಿಂದ ಮುಕ್ತಿ ಪಡೆಯಬೇಕೆಂದರೆ, ನೀವು ಸುಗಂಧಭರಿತ ಸೋಪ್ ಅನ್ನು ನಿಮ್ಮ ಗುದದ್ವಾರವನ್ನ ಸ್ವಚ್ಛವಾಗಿಡಲು ಬಳಸಬೇಡಿ. ವಾಸ್ತವದಲ್ಲಿ ಇವುಗಳು ಚರ್ಮಕ್ಕೆ ಇದು ಇರಿಸುಮುರಿಸು ಉಂಟು ಮಾಡುತ್ತವೆ.

ಗುದದ್ವಾರದ ತುರಿಕೆಗೆ ಮನೆ ಔಷಧಿಗಳು
೧. ನಿಂಬೆ ರಸ
ಸ್ವಲ್ಪ ಪ್ರಮಾಣದ ನಿಂಬೆ ರಸವನ್ನ ಹತ್ತಿಯ ಉಂಡೆಗೆ ಹಚ್ಚಿಕೊಂಡು ನಿಮ್ಮ ಗುದದ್ವಾರದ ಮೇಲೆ ಸವರಿಕೊಳ್ಳಿ. ನಿಮ್ಮ ತುರಿಕೆ ಕಡಿಮೆ ಆಗುವವರೆಗೆ ಇದನ್ನ ಪ್ರತಿದಿನ ಒಮ್ಮೆ ಮುಂದುವರಿಸಿ.

೨. ಬೆಳ್ಳುಳ್ಳಿ
ಒಂದು ವಾರದವರೆಗೆ ಪ್ರತಿದಿನ ಊಟದ ಮುನ್ನ 2-3 ಬೆಳ್ಳುಳ್ಳಿ ಎಸಳನ್ನು ತಿನ್ನಿ. ಅಥವಾ ಇದರ ಬದಲು, ಸ್ವಲ್ಪ ಬೆಳ್ಳುಳ್ಳಿ ಎಸಳನ್ನ ಜೇಜ್ಜಿ ಅದನ್ನ ಬಿಸಿ ಹಾಲಿಗೆ ಬೆರೆಸಿ ಕುಡಿಯಿರಿ. ಇದನ್ನು ಕೂಡ ದಿನಕ್ಕೆ ಒಮ್ಮೆಯಂತೆ ಒಂದು ವಾರದವರೆಗೆ ಕುಡಿಯಿರಿ.

೩. ಅಲೋವೆರಾ (ಲೋಳೆಸರ)
ಅಲೋವೆರಾ ಎಲೆಯಿಂದ ತಾಜಾ ರಸವನ್ನ ಒಂದು ಬಟ್ಟಲಿನಲ್ಲಿ ಹೀರಿಕೊಳ್ಳಿ.. ಈ ರಸವನ್ನ ನಿಮ್ಮ ಗುದದ್ವಾರಕ್ಕೆ ಹಚ್ಚಿಕೊಂಡು 5 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈ ವಿಧಾನವನ್ನ ನಿಮ್ಮ ತುರಿಕೆ ಅಥವಾ ನೋವು ಆಗುವವರೆಗೂ, ಕೆಲವು ಗಂಟೆಗಳಿಗೆ ಒಮ್ಮೆ ಮಾಡಿರಿ.

೪. ಐಸ್ ಪ್ಯಾಕ್ಸ್
ಒಂದು ಐಸ್-ಬ್ಯಾಗ್ ಅಥವಾ ಇನ್ಯಾವುದಾದರೂ ಚೀಲದಲ್ಲಿ ಕೆಲವಷ್ಟು ಐಸ್ ಕ್ಯೂಬ್ಸ್ ಅನ್ನು ಕಟ್ಟಿ, ಅದನ್ನ ಪ್ರತಿ 10-15 ನಿಮಿಷಗಳಿಗೊಮ್ಮೆ ನಿಮ್ಮ ಗುದದ್ವಾರದ ಮೇಲೆ ಇಟ್ಟುಕೊಳ್ಳಿ. ಈ ನೈಸರ್ಗಿಕ ವಿಧಾನವನ್ನ ದಿನಕ್ಕೆ 5 ಬಾರಿ ಪ್ರಯತ್ನಿಸಿ.

Comments are closed.