ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯ ಸೆಲೆಬ್ರಿಟಿಗಳು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವವರಿಗೆ, ಲಾಕ್ ಡೌನ್‌ನಿಂದ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ನಟ, ರಾಜಕಾರಣಿ ಪ್ರಕಾಶ್ ರಾಜ್ ಕೂಡ ಈ ಹಿಂದೆ ಅಕ್ಕಿ ಮೂಟೆ ನೀಡಿದ್ದರು, ಮನೆಯ ಕೆಲಸಗಾರರಿಗೆ ಮುಂಚಿತವಾಗಿ ಸಂಬಳ ನೀಡಿದ್ದರು.
ಮಾನವೀಯತೆ ಇರಬೇಕು: ಪ್ರಕಾಶ್ ರೈ
‘ನನ್ನ ಹಣಕಾಸಿನ ಮೂಲಗಳು ಕ್ಷೀಣಿಸುತ್ತಿವೆ. ಆದರೆ ಸಾಲ ಬೇಕಾದರೂ ತಗೊಂಡು ನಾನು ಇವರೆಲ್ಲರಿಗೆ ಸಹಾಯ ಮಾಡುತ್ತೇನೆ. ಮತ್ತೆ ನಾನು ಈ ಹಣ ಸಂಪಾದನೆ ಮಾಡಬಹುದು ಎಂದು ನನಗೆ ತಿಳಿದಿದೆ. ಕಷ್ಟದ ಸಮಯದಲ್ಲಿ ಮಾನವೀಯತೆ ಇದ್ದರೆ ಒಳ್ಳೆಯದು’ ಎಂದು ಟ್ವೀಟ್ ಮಾಡಿದ್ದಾರೆ ಪ್ರಕಾಶ್ ರೈ.
ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುತ್ತಿರುವ ಪ್ರಕಾಶ್ ರೈ!
ಸದಾ ನಟನೆ, ರಾಜಕೀಯದಲ್ಲಿ ಬ್ಯುಸಿಯಾಗಿರುತ್ತಿದ್ದ ನಟ ಪ್ರಕಾಶ್ ರೈ ಈಗ ಲಾಕ್‌ಡೌನ್ ಕಾರಣದಿಂದ ಅವರ ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಬಹುತೇಕ ಸಮಯವನ್ನು ಅವರು ತೋಟದಲ್ಲೇ ಕಳೆಯುತ್ತಿದ್ದಾರೆ. ಕೇವಲ ಪ್ರಕಾಶ್ ರೈ ಅಷ್ಟೇ ಅಲ್ಲದೆ ಅವರ ಸಂಪೂರ್ಣ ಕುಟುಂಬ ಸಹ ತೋಟದಲ್ಲೇ ಉಳಿದುಕೊಂಡಿದೆ.
ಕೊರೊನಾ ವೈರಸ್ ಬಗ್ಗೆ ಔಷಧಿ ಸೂಚಿಸಿದ್ದ ಪ್ರಕಾಶ್ ರೈ!
‘ಬಿಸಿ ನೀರಿಗೆ ನಿಂಬೆ ಹಣ್ಣಿನ ರಸ ಹಾಕಿಕೊಂಡು ಕುಡಿದರೆ ಕೊರೊನಾ ವೈರಸ್ ಬರೋದಿಲ್ಲ, ನಂಬಲೂ ಆಗದ ಮೂಲದಿಂದ ನನಗೆ ಈ ಮಾಹಿತಿ ಸಿಕ್ಕಿದೆ. ಹಾಗಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನೀವೂ ಶೇರ್ ಮಾಡಿ’ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು. ನಂತರ ಅದು ತಪ್ಪು ಎಂದು ಗೊತ್ತಾದಮೇಲೆ ಆ ಟ್ವೀಟ್ ಡಿಲಿಟ್ ಮಾಡಿದ್ದರು. ಅಲ್ಲದೆ, ಇದಕ್ಕೆ ಸ್ಪಷ್ಟನೆ ಕೂಡ ನೀಡಿದ್ದರು. ಜನರಿಗೆ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಟ ಪ್ರಕಾಶ್ ರೈ ಈ ಟ್ವೀಟ್ ಮಾಡಿದ್ದರು. ಆದರೆ ಇದು ಸುಳ್ಳು ಎಂದು ತಿಳಿದ ನಂತರ ಜನರು ಇದನ್ನು ಟ್ರೋಲ್ ಮಾಡಿದ್ದರು.
Comments are closed.