ಕುಂದಾಪುರ: ಕೋವಿಡ್-19 ಕೊರೋನಾ ವೈರಸ್ ಸಂದರ್ಭವೂ ಶ್ರಮವಹಿಸಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಕುಂದಾಪುರ ಪುರಸಭೆ ವತಿಯಿಂದ ನಿತ್ಯ ಬಳಕೆ ವಸ್ತುಗಳ ಕಿಟ್ ನೀಡಲಾಯಿತು.
ರೆಡ್ ಕ್ರಾಸ್ ವತಿಯಿಂದ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಅವರ ಮುಖಾಂತರ ನೀಡಲಾದ ಕಿಟ್ ಅನ್ನು ಪುರಸಭೆ ಪೌರಕಾರ್ಮಿಕರಿಗೆ ನೀಡಿದ್ದು ಸೋಮವಾರ ಕಿಟ್ ಗಳನ್ನು ಕುಂದಾಪುರ ಎಸಿ ಕೆ. ರಾಜು ಅವರು ಕುಂದಾಪುರದ 38 ಮಂದಿ ಪೌರಕಾರ್ಮಿಕರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮೊದಲಾದವರಿದ್ದರು.
ಲಾಕ್ ಡೌನ್ ಇದ್ದು ಕೊರೋನಾ ಭೀತಿಯ ನಡುವೆಯೂ ಕೂಡ ಪೌರಕಾರ್ಮಿಕರ ಶ್ರಮ ನಿಜಕ್ಕೂ ಅವಿರತವಾಗಿದೆ. ಸ್ವಚ್ಚ ಕುಂದಾಪುರಕ್ಕೆ ಇವರ ಕೊಡುಗೆ ಅಪಾರ. ಅಲ್ಲದೇ ಕೋವಿಡ್ ನಿಯಂತ್ರಣಕ್ಕಾಗಿ ನಿತ್ಯ ಪುರಸಭೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ಔಷದೀಯ ರಾಸಾಯನಿಕ ಸಿಂಪಡಣೆ ಕಾರ್ಯವೂ ನಡೆಯುತ್ತಿದೆ.
(ವರದಿ-ಯೋಗೀಶ್ ಕುಂಭಾಸಿ)
Comments are closed.