ನವದೆಹಲಿ: ಜಾಗತಿಕ ಮಟ್ಟದ ಪಿಡುಗು ಆಗಿರುವ ಕೊರೋನಾ ಸೋಂಕು ಭಾರತವನ್ನು ಕೂಡ ಕಂಗೆಡಿಸಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಕೇಂದ್ರ ಆರೋಗ್ಯ ಸಚಿವಾಲಯದ ಇಂದಿನ ವರದಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,800 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ. 47 ಸಾವು ಸಂಭವಿಸಿದ್ದು, ಇದೀಗ ಕೊರೋನಾ ಸೋಂಕಿತರ ಸಂಖ್ಯೆ 18 ಸಾವಿರದ 601ಕ್ಕೇರಿದೆ. 3 ಸಾವಿರದ 252 ಮಂದಿ ಗುಣಮುಖರಾಗಿದ್ದು, ಇದುವರೆಗೆ ಒಟ್ಟು 590 ಮಂದಿ ಮೃತಪಟ್ಟಿದ್ದಾರೆ.
ತನ್ನ ದಿನನಿತ್ಯದ ವಿವರಣೆಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ನಿನ್ನೆ ಪ್ರಕಟಣೆ ಹೊರಡಿಸಿ, ಶೇಕಡಾ 80ರಷ್ಟು ಕೋವಿಡ್-19 ರೋಗಿಗಳು ಸೋಂಕಿನ ವಿವಿಧ ಲಕ್ಷಣಗಳನ್ನು ಹೊಂದಿದ್ದಾರೆ. ಲಾಕ್ ಡೌನ್ ಮೊದಲು ದಿನಕ್ಕೆ ಶೇಕಡಾ 7.5ರಷ್ಟಿದ್ದ ಕೊರೋನಾ ಸೋಂಕಿತರ ಸಂಖ್ಯೆ ಲಾಕ್ ಡೌನ್ ನಂತರ ಶೇಕಡಾ 3.4ಕ್ಕೆ ಇಳಿದಿದೆ ಎಂದು ಹೇಳಿದೆ.
Comments are closed.