ಗುಲ್ಕನ್ ಅಂದ್ರೆ ಗುಲಾಬಿ ಹೂವಿನ ಎಲೆಗಳಿಂದ ಮಾಡಿದ ಒಂದು ಆರೋಗ್ಯದಾಯಕ ಜಾಮ್ ಅನ್ನಬಹುದು ಗುಲ್ಕನ್ ನಿಯಮಿತವಾಗಿ ಸೇವಿಸುವುದರಿಂದ್ ಆರೋಗ್ಯದಲ್ಲಿ ಉತ್ತಮ ಪ್ರಯೋಜನ ಪಡೆಯಬಹುದು. ಗುಲ್ಕನ್ ಅನ್ನು ಹಲವು ರೀತಿಯಲ್ಲಿ ಬಳಸಬಹುದು. ಕೆಲವರು ಇದನ್ನು ಬಾಯಿಯ ಅಲ್ಸರ್ ನಿವಾರಿಸಲು ಬಳಸುತ್ತಾರೆ. ಇನ್ನು ಕೆಲವರು ಬ್ರೆಡ್ ಗೆ ಜಾಮ್ ರೀತಿಯಲ್ಲಿ ಹಾಕಿಕೊಂಡು ತಿನ್ನುತ್ತಾರೆ. ಆಯುರ್ವೇದದಲ್ಲಿ ಗುಲ್ಕನ್ ಅನ್ನು ವಿಶಿಷ್ಟ ರೀತಿಯಲ್ಲಿ ತಯಾರಿಸುತ್ತಾರೆ. ಆರಿಸಿದ ತಾಜಾ ಗುಲಾಬಿ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಬೆಲ್ಲ ಇಲ್ಲವೇ ಸಕ್ಕರೆ ಸೇರಿಸುತ್ತಾರೆ. ಗುಲ್ಕನ್ ತಯಾರಿಕೆಯಲ್ಲಿ ಶುಂಠಿಯನ್ನು ಬಳಸುತ್ತಾರೆ. ಗುಲ್ಕನ್ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ಉಷ್ಣತೆ ಜಾಸ್ತಿಯಾದರೆ ದೇಹವನ್ನು ತಂಪು ಮಾಡಲು ಗುಲ್ಕನ್ ತಿಂದರೆ ಒಳ್ಳೆಯದು.
ನಿತ್ಯ ಗುಲ್ಕನ್ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು.ದೇಹವನ್ನು ಇದು ತಂಪಾಗಿಡುತ್ತದೆ.
ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆ ನೋವನ್ನು ಇದು ಶಮನ ಮಾಡುತ್ತದೆ.ಗರ್ಭಿಣಿಯರು ಗುಲ್ಕನ್ ಸೇವಿಸಿದರೆ ಒಳ್ಳೆಯದು.
ಗುಲ್ಕನ್ ದೇಹದ ರಕ್ತವನ್ನು ಶುದ್ಧೀಕರಿಸುತ್ತದೆ.ನಿಶ್ಯಕ್ತಿ ದೂರ ಮಾಡುವ ಗುಣ ಹೊಂದಿರುವ ಗುಲ್ಕನ್ ದೇಹದಲ್ಲಿನ ಅನಗತ್ಯ ಅಂಶಗಳನ್ನು ಹೊರಹಾಕುತ್ತದೆ.
ಬೇಸಿಗೆಯಲ್ಲಿ ಗುಲ್ಕನ್ ಹೆಚ್ಚಾಗಿ ಸೇವಿಸುವುದರಿಂದ ಉಷ್ಣಘಾತ ಮತ್ತು ಮೂಗಿನಲ್ಲಿ ರಕ್ತ ಬರುವುದನ್ನು ತಡೆಯಬಹುದು
ಫೈಬರ್ ಅಂಶ ಹೆಚ್ಚಾಗಿರುವ ಗುಲ್ಕನ್ ಅನ್ನು ಮಕ್ಕಳಿಗೆ ಪ್ರತಿನಿತ್ಯ ನೀಡುವುದರಿಂದ ಮಲಬದ್ದತೆ ದೂರವಾಗುತ್ತದೆ.
Comments are closed.