ಕರ್ನಾಟಕ

ರಾಜ್ಯದಲ್ಲಿ ಕೊರೋನಾ ವೈರಸ್; ಗುರುವಾರ ಮತ್ತೆ ಹೊಸದಾಗಿ 16 ಮಂದಿಯಲ್ಲಿ ಸೋಂಕು ಪತ್ತೆ-ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಭಾವ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಗುರುವಾರ ಮತ್ತೆ ಹೊಸದಾಗಿ 16 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ.

ಬೆಂಗಳೂರು ಮೂಲಕ ಸೋಂಕಿತನ ಸಂಖ್ಯೆ 419ರ ಸಂಪರ್ಕದಿಂದ ಬರೋಬ್ಬರಿ 9 ಜನರಿಗೆ ಸೋಂಕು ಹರಡಿದೆ. ಇವರೆಲ್ಲರೂ ಬೆಂಗಳೂರಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರೊಂದಿಗೆ ರಾಜ್ಯದಲ್ಲಿ ಒಟ್ಟು 443 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರಲ್ಲಿ 17 ಜನರು ಮೃತಪಟ್ಟಿದ್ದಾರೆ. ಈ ನಡುವೆ 141 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಸೋಂಕಿತ ಪ್ರರಕರಣಗಳ ವಿವರ:

ಸೋಂಕಿತ 428, ವಿಜಯಪುರದ 32 ವರ್ಷದ ವ್ಯಕ್ತಿಯಾಗಿದ್ದು, ಅವರು ಸೋಂಕಿತ 221ರ ಸಂಪರ್ಕದಲ್ಲಿದ್ದರು. ಅವರನ್ನು ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿತೆ 429 ವಿಜಯಪುರದ 25 ವರ್ಷದ ಮಹಿಳೆಯಾಗಿದ್ದು, ಅವರ ಸೋಂಕಿಗೆ ಕಾರಣವಾದ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಅವರನ್ನು ಕೂಡ ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿತ 430 ಹುಬ್ಬಳ್ಳಿ-ಧಾರವಾಡದ 30 ವರ್ಷದ ಮಹಿಳೆಯಾಗಿದ್ದು, ಇವರು ಸೋಂಕಿತ 236ರ ಸಂಪರ್ಕದಲ್ಲಿದ್ದರು.

ಸೋಂಕಿತ 431 ಹುಬ್ಬಳ್ಳಿ ಧಾರವಾಡದ ಬಾಲಕಿಯಾಗಿದ್ದು, ಸೋಂಕಿತೆ 236ರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.

ಸೋಂಕಿತ 432 ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವೃದ್ಧೆಯಾಗಿದ್ದು, ಅವರು ಸೋಂಕಿತೆ 390ರ ಸಂಪರ್ಕದಲ್ಲಿದ್ದರು. ಅವರನ್ನು ಜಿಲ್ಲೆಯ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿತರಾದ 433, 434, 435, 436,437, 438, 439, 440, 441, ಬೆಂಗಳೂರು ನಗರದ ನಿವಾಸಿಗಳಾಗಿದ್ದು, ಎಲ್ಲರೂ ಪುರುಷರು. ಅವರೆಲ್ಲರೂ ಸೋಂಕಿತ 419ರ ಸಂಪರ್ಕದಲ್ಲಿದ್ದರು. ಅವರನ್ನು ನಿಗದಿತ ಆಸ್ಪತ್ರೆಗೆ ಸೇರಿಸಲಾಗಿದೆ.

ಸೋಂಕಿತ 442 ಮಂಡ್ಯ ಜಿಲ್ಲೆಯ 47 ವರ್ಷದ ಪುರುಷ ವ್ಯಕ್ತವಾಗಿದ್ದು, ಅವರು ಸೋಂಕಿತ 171, 371ರ ಸಂಪರ್ಕದಲ್ಲಿದ್ದರು.

ಸೋಂಕಿತ 443, ಮಂಡ್ಯ ಜಿಲ್ಲೆಯ ಮಳವಳ್ಳಿಯ, 28 ವರ್ಷದ ಮಹಿಳೆಯಾಗಿದ್ದು, ಅವರು ರೋಗಿ 179ರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.

Comments are closed.