ಎಲ್ಲ ಯುವಕ-ಯುವತಿಯರಿಗೂ ತಾನೊಂದು ದಿನ ಆಕಾಶದಲ್ಲಿ ಹಾರಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಇಂದಿನ ಕಾಲದಲ್ಲಿ ಆಕಾಶದಲ್ಲಿ ವಿಮಾನ ಪ್ರಯಾಣ ಮಾಡುವುದು ಕಷ್ಟದ ವಿಷಯವೇನಲ್ಲ. ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣ ಮಾಡಲು ಸಾಕಷ್ಟು ಅವಕಾಶಗಳಿವೆ. ಆದರೆ, ಚೀನಾದ ಯುವತಿಯೊಬ್ಬಳಿಗೆ ತಾನು ಪೈಲಟ್ ಸೀಟ್ನಲ್ಲಿ ಕುಳಿತುಕೊಳ್ಳಬೇಕೆಂಬ ಆಸೆಯಿತ್ತು.
ಆ ಯುವತಿ ತನ್ನ ಬಯಕೆಯನ್ನು ಪೈಲಟ್ ಬಳಿ ಹೇಳಿಕೊಳ್ಳುತ್ತಿದ್ದಂತೆ ಒಪ್ಪಿಗೆ ನೀಡಿದ ಪೈಲಟ್ ತನ್ನ ಸೀಟನ್ನು ಯುವತಿಗೆ ಬಿಟ್ಟುಕೊಟ್ಟ. ಆ ಪೈಲಟ್ ಸೀಟಿನಲ್ಲಿ ಕುಳಿತ ಯುವತಿ ಫೋಟೋ ಕ್ಲಿಕ್ಕಿಸಿಕೊಂಡಳು. ಅಷ್ಟೇ ಅಲ್ಲ, ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ‘ನನಗೆ ಈ ಅದ್ಭುತ ಅವಕಾಶ ಒದಗಿಸಿಕೊಟ್ಟ ಕ್ಯಾಪ್ಟನ್ಗೆ ಧನ್ಯವಾದಗಳು’ ಎಂದು ಕೂಡ ಬರೆದಿದ್ದಳು.
ಕಾಕ್ಪಿಟ್ನಲ್ಲಿ ಯುವತಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದರಿಂದ ವಿಮಾನದ ಪ್ರಯಾಣಿಕರ ಸುರಕ್ಷತೆ, ವಿಮಾನ ಸಂಸ್ಥೆಯ ಮೇಲಿನ ನಂಬಿಕೆ ಹಾಳಾಗುತ್ತದೆ ಎಂದು ಕೋಪಗೊಂಡ ಅಧಿಕಾರಿಗಳು ಆ ಪೈಲಟ್ನನ್ನು ಅನಿರ್ದಿಷ್ಟಾವಧಿಗೆ ಸಸ್ಪೆಂಡ್ ಮಾಡಿದ್ದಾರೆ.
ಚೀನಾದ ನಾಗರಿಕ ವಿಮಾನಯಾನ ಆಡಳಿತ ಮಂಡಳಿ ನಿಯಮದ ಪ್ರಕಾರ ಪ್ರಯಾಣಿಕರು ಕಾಕ್ಪಿಟ್ನೊಳಗೆ ಪ್ರವೇಶ ಮಾಡುವಂತಿಲ್ಲ. ವಿಶೇಷ ಅನುಮತಿ ಪಡೆದು ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಒಳಗೆ ಪ್ರವೇಶಿಸಲು ಅವಕಾಶವಿದೆ. ಆದರೆ, ನಿಯಮ ಮೀರಿ ಆ ಯುವತಿಯನ್ನು ಒಳಗೆ ಬಿಟ್ಟಿದ್ದಲ್ಲದೆ, ಪೈಲಟ್ ಸೀಟಿನಲ್ಲಿ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶ ನೀಡಿದ್ದಕ್ಕೆ ಆ ಪೈಲಟ್ ಜೊತೆಗೆ ಇತರೆ ಸಿಬ್ಬಂದಿಯನ್ನೂ ಸಸ್ಪೆಂಡ್ ಮಾಡಲಾಗಿದೆ.
Comments are closed.