ಕರ್ನಾಟಕ

ಮೇ 3ರ ನಂತರವೂ ಮದ್ಯ ಸಿಗಲ್ಲ..!

Pinterest LinkedIn Tumblr


ಬೆಂಗಳೂರು: ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ನೌಕರರ ಸಂಬಳ, ಪಿಂಚಣಿ, ಸಾಮಾಜಿಕ ಭದ್ರತಾ ಪಿಂಚಣಿ ಸೇರಿದಂತೆ ಅಗತ್ಯ ಸೇವೆಗಳಿಗೆ ಮಾತ್ರ ವೆಚ್ಚ ಮಾಡಬೇಕು ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೊಸ ಕಾರು, ಪೀಠೋಪಕರಣ ಖರೀದಿ, ಕಟ್ಟಡ ದುರಸ್ತಿ ಮಾಡಕೂಡದೆಂದು ಹಣಕಾಸು ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಈ ನಡುವೆ, ರಾಜ್ಯ ಸರಕಾರಿ ನೌಕರರ ವೇತನ ಕಡಿತ ಮಾಡದೇ ಇರಲು ಸರಕಾರ ನಿರ್ಧರಿಸಿದೆ.

ಹಾಗಾಗಿ ರಾಜ್ಯ ಸರಕಾರಿ ನೌಕರರಿಗೆ ಏಪ್ರಿಲ್‌ ತಿಂಗಳ ಸಂಬಳ ನೀಡುವುದು ಸುಗಮವಾಗಲಿದೆ. ಉಳಿದಂತೆ ಕೋವಿಡ್‌ ನಿರ್ವಹಣೆ ಸಂಬಂಧಿಸಿದಂತೆ ಖರ್ಚು ವೆಚ್ಚ ನೋಡಿಕೊಳ್ಳಬೇಕು. ಆಡಳಿತಾತ್ಮಕ ವೆಚ್ಚವನ್ನು ಕನಿಷ್ಠ ಮಟ್ಟಕ್ಕೆ ಇಳಿಸಬೇಕು. ಆಹಾರ ಭದ್ರತಾ ಯೋಜನೆಗಳಿಗೆ ಆದ್ಯತೆ ಕೊಟ್ಟು ವೆಚ್ಚ ಮಾಡಬಹುದು ಎಂದು ಸೂಚಿಸಲಾಗಿದೆ.

ನಾನಾ ಇಲಾಖೆಗಳು, ನಿಗಮ ಮಂಡಳಿಗಳಲ್ಲಿ ಸಾಲ ಸೌಲಭ್ಯ ತೆಗೆದುಕೊಳ್ಳುವುದಿದ್ದರೆ 15 ದಿನ ಮುಂಚಿತವಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಅನುದಾನಿತ ಸಂಸ್ಥೆಗಳು ಜೂನ್‌ 30ರೊಳಗೆ ಎಚ್‌ಆರ್‌ಎಂಎಸ್‌ ಅಳವಡಿಸಿಕೊಳ್ಳಬೇಕು ಎಂಬ ನಿರ್ದೇಶನ ನೀಡಲಾಗಿದೆ.

ರಾಜ್ಯ ಸರ್ಕಾರವು ಅಗತ್ಯ ಸೇವೆಗಳು, ನೌಕರರ ಸಂಬಳ, ಪಿಂಚಣಿ, ಸಾಮಾಜಿಕ ಭದ್ರತಾ ಪಿಂಚಣಿ, ಆಹಾರ ಭದ್ರತೆ, ಸ್ಥಳೀಯ ಸಂಸ್ಥೆಗಳ ನೌಕರರಿಗೆ ಸಂಬಳ, ಕೋವಿಡ್‌ ನಿರ್ವಹಣೆಗೆ ಸೀಮಿತವಾಗಿ ಕಟ್ಟಡ ದುರಸ್ತಿ, ಸಂಚಾರ ಸೇವೆಗೆ ಅನುದಾನ ಬಳಕೆ ಮಾಡಿಕೊಳ್ಳಬಹುದಾಗಿದೆ.

ಸರ್ಕಾರವು ಹೊಸ ಕಾರು, ಇನ್ನಿತರ ವಾಹನ ಖರೀದಿ ಮಾಡಕೂಡದು. ಪೀಠೋಕರಣ ಖರೀದಿ ಬೇಕಿಲ್ಲ. ಸರಕಾರಿ ಕಟ್ಟಡ ನವೀಕರಣ, ದುರಸ್ತಿ ಬೇಡ ಎಂದು ಹಣಕಾಸು ಇಲಾಖೆ ಸೂಚಿಸಿದೆ.

ಮೇ 3ರ ಬಳಿಕವೂ ಮದ್ಯ ಇಲ್ಲ..!

ಈ ನಡುವೆ, ಹಸಿರು ವಲಯದಲ್ಲಾದರೂ ಮದ್ಯದ ಅಂಗಡಿ ತೆರೆಯಬೇಕು. ಈ ಮೂಲಕ ಅಬಕಾರಿ ಇಲಾಖೆಗೆ ನಿಶ್ಚಿತವಾಗಿ ಆದಾಯ ಬರಲಿದೆ ಎಂದು ಅಧಿಕಾರಿಗಳು ಒತ್ತಡ ತಂದಿದ್ದಾರೆ. ಆದರೆ, ಇದಕ್ಕೆ ಸರಕಾರ ಒಪ್ಪಿಲ್ಲ. ಮೇ 3ರ ಬಳಿಕವೂ ವೈನ್‌ ಶಾಪ್‌, ಬಾರ್‌ ತೆರೆಯುವುದು ಕಷ್ಟಸಾಧ್ಯ ಎಂದು ಅಬಕಾರಿ ಸಚಿವ ಎಚ್‌.ನಾಗೇಶ್‌ ಹೇಳಿದ್ದಾರೆ.

Comments are closed.