ಮನೋರಂಜನೆ

ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ! ಗಣ್ಯರ ಸಂತಾಪ

Pinterest LinkedIn Tumblr

ಮುಂಬಯಿ: ಸೋಂಕಿನಿಂದ ಬಳಲುತ್ತಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ವಿಧಿವಶರಾಗಿದ್ದಾರೆ. ತಮ್ಮ ತಾಯಿಯ ಸಾವಿನ ಬೆನ್ನಲ್ಲೇ ಬಾಲಿವುಡ್ ನಟ ಇರ್ಫಾನ್ ಖಾನ್ ಕೂಡ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಮುಂಬೈನ ಕೋಕಿಲಾಬೆನ್ ಧಿರುಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

54 ವರ್ಷದ ಇರ್ಫಾನ್ ಖಾನ್ ಕಳೆದ ಕೆಲ ವರ್ಷಗಳಿಂದ ನ್ಯೂರೋಎಂಡೋಕ್ರೈನ್ ಸಮಸ್ಯೆಯಿಂದ ಬಳಲುತ್ತಿದ್ದರು. ಇರ್ಫಾನ್ ಖಾನ್ ಆರೋಗ್ಯ ಗಂಭೀರವಾದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಟನನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ನನ್ನ ಆತ್ಮೀಯ ಮಿತ್ರ ಇರ್ಫಾನ್ ಖಾನ್ ವಿಧಿವಶರಾಗಿದ್ದು ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಸೂಜಿತ್ ಸರ್ಕಾರ್ ಟ್ವೀಟ್ ಮಾಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇರ್ಫಾನ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರ ನಿಧನ ನಮಗೆ ಆಘಾತವನ್ನುಂಟು ಮಾಡಿದೆ, ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಟ್ವೀಟ್ ಮಾಡಿದ್ದಾರೆ.

ಇರ್ಫಾನ್ ಅವರ ಅನಾರೋಗ್ಯದ ಬಗ್ಗೆ ಮಾಹಿತಿ ಸಿಗುತ್ತಲೇ ಅಭಿಮಾನಿಗಳೆಲ್ಲರೂ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದರು. ಇರ್ಫಾನ್‌ ನ್ಯೂರೋ ಎಂಡೊಕ್ರೈನ್ ಟ್ಯೂಮರ್ ಎಂಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದುದಾಗಿ ಅವರೇ 2018ರಲ್ಲಿ ಅವರೇ ಮಾಹಿತಿ ನೀಡಿದ್ದರು. ಈ ಅಪರೂಪದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅವರು ವಿದೇಶಕ್ಕೂ ಕೂಡ ಹೋಗಿದ್ದರು. ಹೀಗಾಗಿ ಸುಮಾರು ಒಂದು ವರ್ಷದಿಂದ ಸಿನಿಮಾಗಾಗಿ ಬಣ್ಣ ಹಚ್ಚಿರಲಿಲ್ಲ. ಆಮೇಲೆ ಲಂಡನ್‌ನಲ್ಲಿ‌ ಚಿಕಿತ್ಸೆ ಪಡೆದು ಪುನಃ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಅವರು ಮುಂಬೈನಲ್ಲಿ ಪತ್ನಿ ಸುತಾಪಾ ಸಿಕದರ್, ಮಕ್ಕಳಾದ ಬಾಬಿಲ್ ಮತ್ತು ಆಯಾನ್ ಜೊತೆ ವಾಸಿಸುತ್ತಿದ್ದರು. ಆದರೆ ಅವರು ಚಿಕ್ಕ ವಯಸ್ಸಿನಲ್ಲಿ ನಿಧನರಾಗಿರೋದು ನಿಜಕ್ಕೂ ಬೇಸರದ ಸಂಗತಿ

ಕೆಲ ದಿನಗಳ ಹಿಂದಷ್ಟೇ ಇರ್ಫಾನ್‌ ಖಾನ್ ಅವರ ತಾಯಿ ಸಯೀದಾ ಬೇಗಂ ಸಾವನ್ನಪ್ಪಿದ್ದರು. ಲಾಕ್‌ಡೌನ್‌ ಇದ್ದಿದ್ದರಿಂದ ತಾಯಿಯ ಅಂತ್ಯಸಂಸ್ಕಾರಕ್ಕೂ ಇರ್ಫಾನ್ ಹೋಗಿರಲಿಲ್ಲ. ಇವರು ವಿಡಿಯೋ ಕಾನ್ಫರೆನ್ಸ್ ಮೂಲಕವೇ ತಾಯಿಯ ಅಂತಿಮ ದರ್ಶನ ಪಡೆದಿದ್ದರು.

ಕ್ಯಾನ್ಸರ್ ಇರೋದು ಗೊತ್ತಾಗುತ್ತಿದ್ದಂತೆಯೇ ಇರ್ಫಾನ್ ಅವರು ‘ನನಗೆ ನಂಬಿಕೆಯಿದೆ, ನಾನು ಶರಣಾಗಿದ್ದೇನೆ’ ಎಂಬ ಮಾತನಾಡಿದ್ದರು. ಇವರ ಕುಟುಂಬದ ಮೂಲಗಳು ಹೇಳುವಂತೆ ಕ್ಯಾನ್ಸರ್ ವಿರುದ್ಧ ಇರ್ಫಾನ್ ತುಂಬ ಹೋರಾಟ ಮಾಡಿದ್ದರು. ಮಾನಸಿಕವಾಗಿ ಗಟ್ಟಿಯಿದ್ದ ವ್ಯಕ್ತಿ ಅವರು. ಸಿನಿಮಾಗಳಲ್ಲಿ ಮಾತಿಗಿಂತ ಹೆಚ್ಚಾಗು ಕೇವಲ ಹಾವಭಾವ, ಕಣ್ಣಿನ ಅಭಿನಯದ ಮೂಲಕವೇ ಎಲ್ಲ ಭಾವನೆಗಳನ್ನು ಹೊರಹಾಕುತ್ತಿದ್ದ ಇವರನ್ನು ಕಂಡ್ರೆ ಹಲವರಿಗೆ ಇಷ್ಟ. ಸಾಕಷ್ಟು ಜನರಿಗೆ ಸ್ಫೂರ್ತಿ ನೀಡುವ ವ್ಯಕ್ತಿತ್ವವನ್ನುಳ್ಳ ಇರ್ಫಾನ್ ಈಗ ಪತ್ನಿ, ಮಗಳನ್ನು ಅಗಲಿದ್ದಾರೆ.

Comments are closed.