ಕುಂದಾಪುರ: ಮುಂಬೈನಿಂದ ಲಾರಿಯಲ್ಲಿ ಕುಂದಾಪುರ-ಉಡುಪಿ ಮಾರ್ಗವಾಗಿ ಮಂಡ್ಯಕ್ಕೆ ತೆರಳಿದ್ದ ಕೊರೋನಾ ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಲಾರಿ ನಿಲ್ಲಿಸಿ ಊಟ ಮತ್ತು ಸ್ನಾನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಸೀಲ್ ಡೌನ್ ಮಾಡಿದ್ದು ಬುಧವಾರದವರೆಗೆ 19 ಮಂದಿಯನ್ನು ಕ್ವಾರೆಂಟೈನ್ ಮಾಡಲಾಗಿದೆ. ಈ ಬಗ್ಗೆ ಯಾವುದೇ ಗೊಂದಲ ಹುಟ್ಟಿಸುವ ಸಂದೇಶ ರವಾನಿಸಬಾರದು. ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್ ಬಳಿಕ ಒಂದಷ್ಟು ಮಂದಿ ಕ್ವಾರೆಂಟೈನ್ ಕರೆದೊಯ್ದವರ ವೈದ್ಯಕೀಯ ವಿಚಾರದಲ್ಲಿ ಸಮಾಜಿಕ ಜಾಲತಾಣದಲ್ಲಿ ಅನಗತ್ಯ ಸಂದೇಶ ಹಬ್ಬಿಸುತ್ತಿದ್ದು ಇದೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮಂಡ್ಯದ ವ್ಯಕ್ತಿ ಮುಂಬೈನಿಂದ ಲಾರಿಯಲ್ಲಿ ಆಗಮಿಸಿ ತೆಕ್ಕಟ್ಟೆ ಬಂಕಿಗೆ ಬಂದು ರಾತ್ರಿ ಅಲ್ಲಿಯೇ ತಂಗಿ ಸ್ನಾನ ಮತ್ತು ಊಟ ಮಾಡಿದ ಹಿನ್ನೆಲೆ ಪೆಟ್ರೋಲ್ ಪಂಪ್ ಮಾಲಿಕ ಸೇರಿದಂತೆ 11 ಮಂದಿ ಸಿಬ್ಬಂದಿಗಳು, 7 ಮಂದಿ ಸಾಸ್ತಾನ ಟೋಲ್ ಸಿಬ್ಬಂದಿಗಳನ್ನು ಸೋಮವಾರ ರಾತ್ರಿ ಹಾಗೂ ಮಂಗಳಾವರ ಬೆಳಿಗ್ಗೆ ಕ್ವಾರೆಂಟೈನ್ ಮಾಡಲಾಗಿತ್ತು. ಇನ್ನು ಪೆಟ್ರೋಲ್ ಪಂಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರವೂ ಓರ್ವ ವ್ಯಕ್ತಿಯನ್ನು ಕ್ವಾರೆಂಟೈನ್ ಮಾಡಲಾಗಿದೆ. ಎಲ್ಲರೂ ಸದ್ಯ ಐಸೋಲೇಶನ್ ವಾರ್ಡಿನಲ್ಲಿದ್ದು ಗಂಟಲು ದ್ರವ ಪರೀಕ್ಷೆ ನಡೆದಿದೆ. ಇನ್ನೂ ಕೂಡ ವರದಿ ಬಂದಿಲ್ಲ. ಗುರುವಾರ ಸಂಜೆಯೊಳಕ್ಕೆ ವರದಿ ಕೈಸೇರುವ ಸಾಧ್ಯತೆ ಇದೆ ಎಂದು ವೈದ್ಯ ಮೂಲಗಳು ತಿಳಿಸಿದೆ.
ಇದನ್ನೂ ಓದಿರಿ-
ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್’ಗೆ ಕ್ರಮ- ಬ್ಯಾರಿಕೇಡ್ ಅಳವಡಿಕೆ, ಕ್ರಿಮಿನಾಶಕ ಸಿಂಪಡಣೆ (Video)
Big Breaking: ತ್ರಾಸಿಯಲ್ಲ….ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್, ಹಲವರು ಕ್ವಾರೆಂಟೈನ್ಗೆ
Comments are closed.