ಕರ್ನಾಟಕ

ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ

Pinterest LinkedIn Tumblr


ಬೆಂಗಳೂರು(ಮೇ.06): ರಾಜಧಾನಿ ಬೆಂಗಳೂರಿನಲ್ಲಿ ಜೋರು ಮಳೆಯಾಗುತ್ತಿದೆ. ಲಾಕ್​ಡೌನ್​​ನ ಪರಿಣಾಮ ಮನೆಯಲ್ಲೇ ಸೇರಿಕೊಂಡು ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ನಗರದ ಜನರಿಗೆ ವರುಣನ ಆರ್ಭಟದಿಂದ ತಂಪೆರೆದಂತಾಗಿದೆ. ಬಿಸಿಲಿನ ಭಾರೀ ಸಖೆಯಿಂದ ಕಂಗಾಲಾಗಿದ್ದ ಜನ ಮಳೆಯಿಂದಾಗಿ ಈಗ ಒಂದಷ್ಟು ನಿಟ್ಟುಸಿರು ಬಿಟ್ಟಂತಾಗಿದೆ.

ನಗರದ ಮೆಜೆಸ್ಟಿಕ್​​, ಮಾರ್ಕೆಟ್​, ಮಲ್ಲೇಶ್ವರಂ, ಬಸವೇಶ್ವರ ನಗರ, ಕಾಮಾಕ್ಷಿಪಾಳ್ಯ, ಕೆ.ಆರ್​​ ಪುರಂ, ಪೀಣ್ಯ, ಶಿವಾಜಿನಗರ, ಜಯನಗರ, ಬಕಶಂಕರಿ, ಬೊಮ್ಮನಹಳ್ಳಿ ಸೇರಿದಂತೆ ಅನೇಕ ಕಡೆ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಈಗ ಸಂಜೆ ವೇಳೆಗೆ ಮಳೆ ಬರುವ ನಿರೀಕ್ಷೆ ಇತ್ತು. ಆದರೀಗ ಜನರ ನಿರೀಕ್ಷೆಯಂತೆಯೇ ಭಾರೀ ಮಳೆಯಾಗುತ್ತಿದೆ. ಕೆಲವೆಡೆ ಗುಡುಗು ಸಹಿತ ಮಳೆಯೂ ಆಗುತ್ತಿದೆ.

ಬಂಗಾಳ ಕೊಲ್ಲಿಯ ಅಂಡಮಾನ್ ದ್ವೀಪದ ಬಳಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪರಿಣಾಮ ರಾಜ್ಯಾದ್ಯಂತ ಮೋಡ ಕವಿದ ವಾತಾವರಣ ಇದೆ. ಸದ್ಯ ಬೆಂಗಳೂರಿನಾದ್ಯಂತ ಸಾಧಾರಣ ಮಳೆ ಆಗುತ್ತಿದೆ. ಇನ್ನು ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ ಎನ್ನಲಾಗಿದೆ.

Comments are closed.