ಕರ್ನಾಟಕ

ಒಬ್ಬ ಕೊವೀಡ್ -19 ಸೋಂಕಿತನ ಚಿಕಿತ್ಸೆಗೆ 3.5ಲಕ್ಷ ವೆಚ್ಚ: ಸುರೇಶ್ ಕುಮಾರ್‌

Pinterest LinkedIn Tumblr


ಬೆಂಗಳೂರು: ಪ್ರಸ್ತುತ ಕೊರೊನಾ ಸೋಂಕಿತರ ಚಿಕಿತ್ಸೆಯ ಜವಾಬ್ದಾರಿಯನ್ನು ರಾಜ್ಯ ಸರಕಾರವೇ ಹೊತ್ತಿದೆ. ಆದರೆ, ಒಬ್ಬ ಸೋಂಕಿತನ ಚಿಕಿತ್ಸೆಗೆ ಎಷ್ಟು ವೆಚ್ಚವಾಗುತ್ತಿದೆ ಎಂದು ಜನಸಾಮಾನ್ಯರಿಗೆ ತಿಳಿದಿಲ್ಲ. ಈ ಕುರಿತ ಪ್ರಶ್ನೆಗೆ ಎಸ್‌. ಸುರೇಶ್‌ ಕುಮಾರ್‌ ಉತ್ತರಿಸಿದ್ದು, ಚಿಕಿತ್ಸಾ ವೆಚ್ಚದ ಮೊತ್ತ ಎಲ್ಲರ ಬೆಚ್ಚಿಬೀಳಿಸುವಂತಿದೆ.

ಪ್ರತಿಯೊಬ್ಬ ಕೊರೊನಾ ಸೋಂಕಿತರ ಚಿಕಿತ್ಸೆಗೆ ಎಷ್ಟು ಖರ್ಚಾಗಲಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಇದುವರೆಗೆ ಕೊರೊನಾ ಚಿಕಿತ್ಸೆಗಾಗಿ 4.74 ಕೋಟಿ ರೂಪಾಯಿ ಖರ್ಚಾಗಿದೆ. ಇಲ್ಲಿ ಇದುವರೆಗೆ 136 ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅಂದರೆ ಪ್ರತಿಯೊಬ್ಬ ಕೊರೊನಾ ಸೋಂಕಿತನ ಚಿಕಿತ್ಸೆಗೆ 3,48,885ರೂಪಾಯಿ ಖರ್ಚಾಗುತ್ತಿದೆ ಎಂದು ತಿಳಿಸಿದ್ದಾರೆ. ಸೇಂಟ್‌ ಜಾನ್ಸ್‌ ಆಸ್ಪತ್ರೆಯಿಂದಲೂ ಕೊರೊನಾ ಚಿಕಿತ್ಸಾ ವೆಚ್ಚ ಕುರಿತು ಮಾಹಿತಿ ಕೇಳಲಾಗಿದೆ ಎಂದು ತಿಳಿಸಿದರು.

ಸರಕಾರ ಮತ್ತೊಂದು ಸುತ್ತಾಲೆ ಹೊರಡಿಸಿದ್ದ. ರಾಜ್ಯದ ಎಲ್ಲ ಕೊರೊನಾ ಪರೀಕ್ಷಾ ಲ್ಯಾಬ್‌ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಲಾಗಿದೆ.

ಬೆಳಗ್ಗೆಯಷ್ಟೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸರ್ವಪಕ್ಷಸಭೆ ನಡೆಸಿದರು. ಈ ಸಭೆಯಲ್ಲಿ ಎಲ್ಲ ಪಕ್ಷಗಳೂ ಸರಕಾರದ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ರಾಜ್ಯದಲ್ಲಿ ಕೊರೊನಾ ಸೋಂಕಿನ ನಿಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲಿ ಸಿಲುಕಿರುವ ಹೊರರಾಜ್ಯಗಳ ವಲಸೆ ಕಾರ್ಮಿಕರನ್ನು ಅವರ ತವರಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಲವಾರು ರಾಜ್ಯಗಳ ಕಾರ್ಮಿಕರು ರಾಜ್ಯದಲ್ಲಿ ಇದ್ದಾರೆ. ಆಯಾ ರಾಜ್ಯಗಳಿಂದ ಅನುಮತಿ ಪಡೆದು ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದ ಸೋಂಕಿತರ ಸಂಖ್ಯೆ 753 ಕ್ಕೇ ಏರಿದೆ. ಒಂದೇ ದಿನದಲ್ಲಿ 48 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ದಾವಣಗೆರೆಯಲ್ಲಿ 11, ಉತ್ತರ ಕನ್ನಡದಲ್ಲಿಯೇ 12 ಹೊಸ ಸೋಂಕುಗಳು ಪತ್ತೆಯಾಗಿವೆ. ಉತ್ತರ ಕನ್ನಡದ 12 ಪ್ರಕರಣಗಳ ಪೈಕಿ 10 ಪ್ರಕರಣಗಳು ಒಂದೇ ಕುಟುಂಬದವರಾಗಿದ್ದಾರೆ. ಚಿತ್ರದುರ್ಗದಲ್ಲಿ ಮೂವರಿಗೆ ಸೋಂಕು ತಗುಲಿದ್ದು, ಇವರು ಅಹಮದಾಬಾದ್‌ಗೆ ಹೋಗಿರುವ ಟ್ರಾವೆಲ್‌ ಹಿಸ್ಟರಿ ಇದೆ ಎಂದು ಮಾಹಿತಿ ನೀಡಿದರು.

Comments are closed.