ಕರ್ನಾಟಕ

ಕೊರೊನಾ ವೈರಸ್ ಇಡೀ ಸಮಾಜದ ಸಮಸ್ಯೆ: ಪಾಸಿಟಿವ್ ಚಿಂತನೆ ಅಗತ್ಯ: ಮಾನಸಿಕ ಆರೋಗ್ಯ ತಜ್ಞ ಡಾ. ಕಣ್ಣಪ್ಪ ಶೆಟ್ಟಿ

Pinterest LinkedIn Tumblr


ಬೆಂಗಳೂರು: ಕೊರೊನಾ ಸೋಂಕು, ಲಾಕ್‌ಡೌನ್ ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಕೆಲಸ ಹಾಗೂ ಆದಾಯವಿಲ್ಲದೆ ಕುಟುಂಬ ನಿರ್ವಹಣೆ ಸಂಬಂಧಿಸಿ ಆತಂಕ ಎದುರಾಗಿದೆ. ಮುಂದಿನ ದಿನಗಳನ್ನು ನಿಭಾಯಿಸುವುದು ಹೇಗೆಂಬ ಭಯದಿಂದ ಉದ್ವೇಗ, ನಿದ್ರಾಹೀನತೆ, ಖಿನ್ನತೆಯಂಥ ಸಮಸ್ಯೆಗಳು ಸಾಮಾನ್ಯ.

ಮೂಡ್ ಡಿಸಾರ್ಡರ್, ಮದ್ಯಪಾನ, ಧೂಮಪಾನದಂಥ ದುಶ್ಚಟಗಳಿಗೆ ಅಂಟಿಕೊಂಡು ಹೊರಬರಲಾರದೆ ನರಳುವುದು(ಅಡಿಕ್ಷನ್), ಆನ್ಲೈನ್ ಜೂಜಾಟ, ನೀಲಿಚಿತ್ರ ವೀಕ್ಷಣೆ, ಟಿವಿ-ಮೊಬೈಲ್‌ಗ ಅತಿಯಾದ ಬಳಕೆಯಂತ ಹೊಸ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು, ಆತ್ಮಹತ್ಯೆಗೆ ಶರಣಾಗುವಂಥ ಪ್ರಕರಣಗಳೂ ಕಂಡುಬರುತ್ತಿವೆ. ಈ ಸ್ಥಿತಿಯಿಂದ ಹೊರಬಂದು ಕೊರೊನಾ ಭೀತಿಯ ನಡುವೆಯೂ ಉತ್ತಮ ಜೀವನ ನಡೆಸಬಹುದು.

ಈ ಸಂಬಂಧ ಬೆಂಗಳೂರು ಅಭಯ್ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯ ತಜ್ಞರಾದ ಡಾ. ಕಣ್ಣಪ್ಪ ಶೆಟ್ಟಿ ಅಮೂಲ್ಯ ಸಲಹೆಗಳನ್ನು ಮುಂದಿಟ್ಟಿದ್ದಾರೆ.

– ಯಾವುದೇ ಸಮಸ್ಯೆಯಾದರೂ ಅದನ್ನು ನಾವು ಹೇಗೆ ತೆಗೆದುಕೊಳ್ಳುತ್ತೇವೆ ಮತ್ತು ಎದುರಿಸುತ್ತೇವೆ ಎಂಬುವುದರಲ್ಲಿಅದರ ಪರಿಹಾರವಿದೆ. ಪ್ರತಿ ವಿಷಯದಲ್ಲಿ ಧನಾತ್ಮಕತೆಯೊಂದಿಗೆ ನಿರ್ವಹಿಸಬೇಕು.

– ಕೊರೊನಾ ಭೀತಿ ನಿಮ್ಮೊಬ್ಬರಿಗೇ ಬಂದಿರುವುದಲ್ಲ. ಇದು ಪ್ರತಿಯೊಬ್ಬರ ಸಮಸ್ಯೆ. ಆದ್ದರಿಂದ ನಾನು ಹಾಗೂ ಸಮಾಜದ ಒಳಿತಿಗಾಗಿ ಹೆಜ್ಜೆ ಇಡುತ್ತೇನೆ ಎಂಬ ನಿರ್ಧಾರಕ್ಕೆ ಬನ್ನಿ

– ಕೊರೊನಾ ನಂತರದಲ್ಲಿ ವರ್ಕ್ ಫ್ರಮ್ ಹೋಂ, ಆನ್ಲೈನ್ ಕ್ಲಾಸ್‌ಗಳಿಗೆ ಆದ್ಯತೆ ದೊರೆಯಬಹುದು. ಹಾಗಾಗಿ ತಂತ್ರಜ್ಞಾದ ಸದ್ಬಳಕೆ ಹಾಗೂ ಜ್ಞಾನ ಹೆಚ್ಚಿಸಿಕೊಳ್ಳುವತ್ತ ಗಮನ ಕೊಡಿ

– ನನ್ನನ್ನು ನಾನು ಹೇಗೆ ಉತ್ತಮ ಪಡಿಸಿಕೊಳ್ಳಬೇಕು ಎಂಬುವುದರ ನಿಟ್ಟಿನಲ್ಲಿ ಹೊಸ ಆಲೋಚನೆ ಹಾಗೂ ಪರಿಹಾರಗಳನ್ನು ಹುಡುಕಿ. ಪೇಂಟಿಂಗ್‌ನಂಥ ಸೃಜನಾತ್ಮಕ ಹವ್ಯಾಸಗಳನ್ನು ಬೆಳೆಸಿಕೊಳ್ಳಿ.

– ಮಕ್ಕಳ ಮೇಲೆ ಒತ್ತಡ ಬೇಡ. ಸಮಾಧಾನವಾಗಿ ತಿಳಿಸಿಕೊಡಿ.

– ವಯಸ್ಸಾದವರಿಗೆ ಪುಸ್ತಕ ಓದುವುದು ಮತ್ತಿತರ ಹವ್ಯಾಸಗಳನ್ನು ಮುಂದುವರಿಸಲು ಬೆಂಬಲ ನೀಡಿ ಹಾಗೂ ಅವರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ ದೊರಕುತ್ತದೆ ಎಂಬ ಧೈರ್ಯ ಮೂಡಿಸಿ.

– ನಿಮಗೆ ಅಥವಾ ಮನೆಯವರಿಗೆ ತಮ್ನನ್ನೇ ತಾವು ನಿರ್ವಹಣೆ ಮಾಡಿಕೊಳ್ಳಲಾಗದಷ್ಟು ಮಾನಸಿಕವಾಗಿ ತೀವ್ರ ಒತ್ತಡ ಉಂಟಾದಾಗ ತಡ ಮಾಡದೆ ಮಾನಸಿಕ ತಜ್ಞರನ್ನು ಭೇಟಿಯಾಗಿ.

– ಜಿಲ್ಲಾಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ತಜ್ಞರು ಸಿಗುತ್ತಾರೆ. ಇಲ್ಲವಾದರೆ ನಿಮ್ಹಾನ್‌ನಿಂದ 080-46110007 ಟಾಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೆ ಖಾಸಗಿ ಆಸ್ಪತ್ರೆಗಳ ಹೆಲ್ಪ್ಲೈನ್ ಅಥವಾ ನೇರವಾಗಿಯೂ ಸಂಪರ್ಕಿಸಬಹುದು.

-ಡಾ. ಕಣ್ಣಪ್ಪ ಶೆಟ್ಟಿ ಮಾನಸಿಕ ಆರೋಗ್ಯ ತಜ್ಞ, ಅಭಯ್ ಆಸ್ಪತ್ರೆ, ಬೆಂಗಳೂರು

Comments are closed.